ಹಾವೇರಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 26ರಂದು ಗಣರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದೆ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 22 ಸಾಧಕರನ್ನು ಸನ್ಮಾನಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಸನ್ಮಾನಕ್ಕೆ ಅರ್ಹರಾದವರನ್ನು ಆಯ್ಕೆ ಮಾಡಲು ಉಪಸಮಿತಿ ರಚಿಸಲಾಗಿತ್ತು. ವಿವಿಧ ಕ್ಷೇತ್ರಗಳ 30 ಮಂದಿ ಸನ್ಮಾನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 22 ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯಾದವರು: ನಿವೃತ್ತ ಪಶು ವೈದ್ಯಾಧಿಕಾರಿ ಡಾ. ವಿ.ಎಫ್. ಕಟಗಿಹಳ್ಳಿಮಠ (ಸಮಾಜ ಸೇವೆ), ಮಲ್ಲೇಶಪ್ಪ ಚಿಕ್ಕಣ್ಣನವರ (ಸಮಾಜಸೇವೆ), ಶೆಟ್ಟಿ ಚಿನ್ನದೊಡ್ಡಪ್ಪ ವಿಭೂತಿ (ಸಮಾಜ ಸೇವೆ), ಹನುಮಂತಪ್ಪ ದೀವಗಿಹಳ್ಳಿ (ಸಮಾಜಸೇವೆ), ಬಸವರಾಜ ತಳವಾರ (ಸಮಾಜ ಸೇವೆ), ಪರಶುರಾಮ ಈಳಗೇರ (ಸಮಾಜಸೇವೆ), ಪ್ರಭಾವತಿ ಕಣ್ಣಪ್ಪನವರ (ಕ್ರೀಡೆ), ಮನು ನರಗುಂದ (ಕ್ರೀಡೆ), ಗುರುಪಾದಪ್ಪ ಅಂಚೇರ (ಶಿಕ್ಷಣ), ವಿಜಯ ಹಂಜಗಿ (ಶಿಕ್ಷಣ), ಶೇಖರ ಭಜಂತ್ರಿ (ಸಾಹಿತ್ಯ), ಜಾನಕಿದೇವಿ ಎನ್. ಯರೇಶೀಮಿ (ಕರಕುಶಲ), ಪ್ರಕಾಶ ಚವ್ಹಾಣ (ಚಿತ್ರಕಲೆ), ಹೊಳಿಯೆಪ್ಪ ಅಕ್ಕಿ (ಪರಿಸರ ರಕ್ಷಣೆ), ಹೂವನಗೌಡ ಮಲ್ಲಪ್ಪ ಹೊಟ್ಟೇರ (ದೊಡ್ಡಾಟ ಕಲಾವಿದ), ಪರಶುರಾಮ ಎಚ್. ಬಣಕಾರ (ಜಾನಪದ ರಂಗಕರ್ಮಿ), ಶಿವಕುಮಾರ ಎಚ್. ಜಾಧವ (ಜಾನಪದ ರಂಗಕರ್ಮಿ), ಕಾವ್ಯ ಕೋಟೆಪ್ಪ ಸಾಲಿ (ಕ್ರೀಡೆ), ಅಶೋಕ ಕೊಡ್ಲಿ (ಸಾಹಿತ್ಯ), ಬೀರಪ್ಪ ನಾಗಪ್ಪ ಲಿಂಗದಹಳ್ಳಿ (ಆರೋಗ್ಯ).

ಬೆಳಿಗ್ಗೆ ಧ್ವಜಾರೋಹಣ: ಜಿಲ್ಲಾ ಕ್ರೀಡಾಂಗಣದಲ್ಲಿ ಜ. 26ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಲಿದೆ. ವಿವಿಧ ರಕ್ಷಣಾ ದಳಗಳು ಪಥಸಂಚಲನ ನಡೆಸಲಿವೆ. ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.