ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜಿಗೆ ಶೇ 80ರಷ್ಟು ಫಲಿತಾಂಶ

Published 15 ಏಪ್ರಿಲ್ 2024, 14:34 IST
Last Updated 15 ಏಪ್ರಿಲ್ 2024, 14:34 IST
ಅಕ್ಷರ ಗಾತ್ರ

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ಸಿ.ಆರ್‌. ಬಳ್ಳಾರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶೇ 80ರಷ್ಟು ತೇರ್ಗಡೆಯಾಗಿದ್ದಾರೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿಂದ 135 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11 ಡಿಸ್ಟಿಂಕ್ಷನ್‌, 58 ಪ್ರಥಮ ಶ್ರೇಣಿ, 24 ದ್ವಿತೀಯ ಶ್ರೇಣಿ ಹಾಗೂ 15 ತೃತೀಯ ಶ್ರೇಣೀಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ ನಾಗಮ್ಮ ಬಣಕಾರ ಶೇ 97.33, ಅಂಕಗಳನ್ನು ಗಳಿಸಿ ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾಳೆ. ರಕ್ಷಿತಾ ಗುಡಗೇರಿ ಶೇ 88.33, ಸಹನಾ ಕುರಿಯವರ ಶೇ 81.83 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಾಗರಾಜ ಗೊರವರ ಶೇ 87.66, ನಂದೀಶ ಕಾಳಪ್ಪನವರ ಶೇ 87.16 ಹಾಗೂ ಹೇಮಾ ಕಟಗಿ ಶೇ 83.33 ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಕ್ಷಿತಾ ಹಿರೇಮಠ ಶೇ 91, ನಾಗರಾಜ ಕಬ್ಬೂರ ಶೇ 88.33, ಅಮೃತ ಮುದ್ದಿನಕೊಪ್ಪ ಶೇ 87.83 ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಾಚಾರ್ಯ ಆನಂದ ಮುದಕಮ್ಮನವರ ತಿಳಿಸಿದ್ದಾರೆ.

ರಕ್ಷಿತಾ
ರಕ್ಷಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT