ರಟ್ಟೀಹಳ್ಳಿ: ‘ಭಾರತೀಯ ಇತಿಹಾಸದಲ್ಲಿ ಶೌರ್ಯ, ಧೈರ್ಯ, ಪರಾಕ್ರಮದಿಂದ ಆಡಳಿತ ನಡೆಸಿದವರಲ್ಲಿ ಶಿವಾಜಿ ಮಹಾರಾಜರು ಅಗ್ರಗಣ್ಯರು’ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕ್ಷತ್ರಿಯ ಮರಾಠ ಸಮಾಜ ಹಾಗೂ ವಿವಿಧ ಸಮುದಾಯಗಳ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಮೆರವಣಿಗೆಯು ಪಟ್ಟಣದ ಕೋಟೆ ಕದಂಬ ನಗರ, ಹಳೇಬಸ್ ನಿಲ್ದಾಣ, ಹೊಸಪೇಟೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ವೃತ್ತ, ಭಗತಸಿಂಗ್ ವೃತ್ತ, ಶಿವಾಜಿ ನಗರ ಮೂಲಕ ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ಸಕಲ ವಾದ್ಯಮೇಳದೊಂದಿಗೆ ಸಾಗಿತು.

ಧರ್ಮಗಿರಿ ಬಾರಾಮಹಲ್ ಮಠದಲ್ಲಿ ಶಿವಾಜಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಸಾರ್ವಜನಿಕರಿಗೆ ಅನ್ನ ಪ್ರಸಾದ ವಿತರಿಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ನಾರಾಯಣಪ್ಪ ಪವಾರ, ಅಣ್ಣಪ್ಪ ಸಾಳುಂಕೆ, ಕೆ.ವೈ. ಬಾಜೀರಾಯರ, ಈರಪ್ಪ ಏಶಪ್ಪನವರ, ವಸಂತ ದ್ಯಾವಕ್ಕಳವರ, ವಾಮನ ನಾಲ್ವಡಿ, ಮಂಜು ಅಸ್ವಾಲಿ, ಕಪಿಲ ಪೂಜಾರ, ಶ್ರೀನಿವಾಸ ಭೈರಪ್ಪನವರ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.