ಹಾವೇರಿ: ಇಲ್ಲಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರಿಗೆ ತುಲಾಭಾರದ ಮೂಲಕ ಭಕ್ತರು ನೀಡಿರುವ 95 ಕೆ.ಜಿ. ಬೆಳ್ಳಿ ಬಳಸಿಕೊಂಡು 1,000 ವಿದ್ಯಾರ್ಥಿಗಳಿಗೆ ವಸತಿ ನಿಲಯ ಹಾಗೂ ಪ್ರಸಾದ ನಿಲಯ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.

ಗುತ್ತಲ ರಸ್ತೆಯಲ್ಲಿರುವ ಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದ ಹಿಂಭಾಗದಲ್ಲಿರುವ 7 ಎಕರೆ ಜಾಗದಲ್ಲಿ ವಸತಿ ನಿಲಯ ಹಾಗೂ ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕೆ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ರುದ್ರಪ್ಪ ಲಮಾಣಿ ಅವರು ಗುದ್ದಲಿ ಪೂಜೆ ಮಾಡಿದರು.

ಬಳಿಕ ಮಾತನಾಡಿದ ಶಾಸಕ, ‘ಬಡ ಮಕ್ಕಳಿಗೆ ಅನುಕೂಲವಾಗಲೆಂದು ಹುಕ್ಕೇರಿಮಠದಿಂದ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಉತ್ತಮ ಕೆಲಸ. ಶಾಸಕರ ಅನುದಾನ ಹಾಗೂ ಸರ್ಕಾರದ ವಿಶೇಷ ಅನುದಾನ ಕೊಡಿಸಲು ಎಲ್ಲ ಸಹಕಾರ ನೀಡುತ್ತೇನೆ’ ಎಂದರು.

ಸದಾಶಿವ ಸ್ವಾಮೀಜಿ ಮಾತನಾಡಿ, ‘ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲು ಭೂಮಿ ಪೂಜೆ ನಡೆದಿದೆ. ಇದೇ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ನಡೆಯಲಿದೆ. ಅನ್ನ, ಅರಿವು, ಆಶ್ರಯವು ಪ್ರತಿ ಮಠ–ಮಾನ್ಯಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಹುಕ್ಕೇರಿಮಠದ ಸರ್ವ ಸುಸಜ್ಜಿತ ವಸತಿ ನಿಲಯವು ಬಡ ಮಕ್ಕಳಿಗೆ ಸದಾ ತೆರೆದಿರುತ್ತದೆ’ ಎಂದರು.

ಮಣಕವಾಡದ ಮೃತ್ಯುಂಜಯ ಸ್ವಾಮೀಜಿ, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಸ್ವಾಮೀಜಿ, ಮುಖಂಡರಾದ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಟಿ.ಎಂ. ಭಾಸ್ಕರ್, ಎಂ.ಎಸ್. ಕೋರಿಶೆಟ್ಟರ, ಮಹೇಶ ಚಿನ್ನಿಕಟ್ಟಿ, ರಾಜಣ್ಣ ಮಾಗನೂರು, ಕೆ. ಮಂಜಪ್ಪ, ಸುಭಾಸ್ ಹುರಳಿಕುಪ್ಪಿ, ನಿರಂಜನ ತಾಂಡೂರ, ಸಂಜೀವಕುಮಾರ ನೀರಲಗಿ, ಶಿವರಾಜ ಅಗಡಿ ಹಾಗೂ ಇತರರು ಇದ್ದರು.

ಸ್ವಾಮೀಜಿ ಕನಸು ನನಸಾಗಿಸಲು ಕೆಲಸ: ‘ಸದಾಶಿವ ಸ್ವಾಮೀಜಿಯವರು ಪಟ್ಟಾಧಿಕಾರ ವಹಿಸಿಕೊಂಡು 15 ವರ್ಷವಾದ ಹಿನ್ನೆಲೆಯಲ್ಲಿ ಭಕ್ತರೆಲ್ಲರೂ ಸೇರಿಕೊಂಡು 95 ಕೆ.ಜಿ. ಬೆಳ್ಳಿ ತುಲಾಭಾರ ಮಾಡಿದ್ದಾರೆ. ಸ್ವಾಮೀಜಿಯವರು ಬೆಳ್ಳಿ ಮಾರಿ, ಬಂದ ಹಣದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕನಸು ಕಂಡಿದ್ದಾರೆ. ಅವರ ಕನಸು ನನಸಾಗಿಸಲು ನಾವೆಲ್ಲರೂ ಕೆಲಸ ಶುರು ಮಾಡಿದ್ದೇವೆ’ ಎಂದು ಮುಖಂಡ ಶಿವರಾಜ ಸಜ್ಜನರ ಹೇಳಿದರು.

‘ಕಲ್ಯಾಣ ಮಂಟಪದ ಹಿಂಭಾಗದಲ್ಲಿ 7 ಎಕರೆ ಜಾಗವಿದೆ. ಅದೇ ಜಾಗದಲ್ಲಿ ವಸತಿ ನಿಲಯ, ಪ್ರಸಾದ ನಿಲಯ ಹಾಗೂ ಇತರೆ ಕಟ್ಟಡಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಲಿಂ. ಶಿವಲಿಂಗ ಸ್ವಾಮೀಜಿಯವರ 109ನೇ ಜಯಂತಿ ಅಂಗವಾಗಿ, ವಸತಿ ನಿಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಭೂ ಪರಿವರ್ತನೆ ಸೇರಿದಂತೆ ಹಲವು ಕೆಲಸಗಳು ಚಾಲ್ತಿಯಲ್ಲಿದ್ದು, ಅನುಮತಿ ಲಭ್ಯವಾಗುತ್ತಿದ್ದಂತೆ ಕೆಲಸ ಶುರು ಮಾಡಲಾಗುವುದು’ ಎಂದರು.

‘ಸದ್ಯ 1,000 ಮಕ್ಕಳಿಗಾಗಿ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಖ್ಯೆ 2,000 ಆಗಬಹುದು. ಇದಕ್ಕೆ ₹ 10 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಬೆಳ್ಳಿ ಮಾರುವುದರಿಂದ ಬರುವ ಹಣದ ಜೊತೆಯಲ್ಲಿ ಮತ್ತಷ್ಟು ಹಣವನ್ನು ಹೊಂದಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

ಶಿವಲಿಂಗ ಸ್ವಾಮೀಜಿ ಜಯಂತಿ ಆಚರಣೆ ಹಾವೇರಿ: ಹುಕ್ಕೇರಿಮಠದಲ್ಲಿ ಲಿಂ. ಶಿವಲಿಂಗ ಸ್ವಾಮೀಜಿಯವರ 109ನೇ ಜಯಂತಿಯನ್ನು ಮಂಗಳವಾರ ಅರ್ಥಪೂರ್ಣವಾಗಿ ಭಕ್ತಿಯಿಂದ ಆಚರಿಸಲಾಯಿತು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ .ಎಂ. ಭಾಸ್ಕರ್ ಮಾತನಾಡಿ ‘ತನು ಮನ ಭಾವ ಶುದ್ಧಿಯಿಂದ ಮಾಡಿದ ಕಾಯಕ ಸದಾ ಸ್ಮರಣೀಯವಾಗಿರುತ್ತದೆ. ಅನ್ನ ಅರಿವು ಆಶ್ರಯಗಳು ಬಸವಾದಿ ಶರಣರ ಸಂಸ್ಕೃತಿಯ ಸಾಕ್ಷಿ ಪ್ರಜ್ಞೆಗಳು. ಅದೇ ಪ್ರಜ್ಞೆಯೊಂದಿಗೆ ಸಾಗುತ್ತಿರುವ ಮಠಗಳು ಸಮಾಜಕ್ಕೆ ಸಂಜೀವಿನಿಯಾಗಿವೆ’ ಎಂದರು. ಸದಾಶಿವ ಸ್ವಾಮೀಜಿ ಮಾತನಾಡಿ ‘ನಮಿಸುವ ಕೈಗಳಿಂತ ದುಡಿಯುವ ಕೈ ಶ್ರೇಷ್ಠ. ಮಠದ ಜಾತ್ರಾ ಮಹೋತ್ಸವ ಹಾಗೂ ಇತರೆ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿಕೊಂಡು ವಿಜೃಂಭಣೆಯಿಂದ ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾವೇರಿಯ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯ ಕಾರ್ಯಕ್ರಮವಾಯಿತು’ ಎಂದರು.

ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಸದಾಶಿವ ಸ್ವಾಮೀಜಿಯವರಿಗೆ ‘ಭಾವೈಕ್ಯತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು ಜಾನಪದ ವಿವಿ ಪ್ರಸಾರಾಂಗ ವಿಭಾಗದ ಪ್ರಕಟಿಸಿದ ಅಂತೂರು–ಬೆಂತೂರಿನ ಕುಮಾರ ಸ್ವಾಮೀಜಿ ರಚಿತ ‘ವಚನಾನುಶೀಲತೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ರಾವೂರಿನ ಸಿದ್ಧಲಿಂಗ ಸ್ವಾಮೀಜಿ ಮಣಕವಾಡದ ಮೃತ್ಯುಂಜಯ ಸ್ವಾಮೀಜಿ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ಕುಮಾರ ಸ್ವಾಮೀಜಿ ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಮುಖಂಡರಾದ ಸಂಜೀವಕುಮಾರ ನೀರಲಗಿ ಕೆ. ಮಂಜಪ್ಪ ಮಹೇಶ ಚಿನ್ನಿಕಟ್ಟಿ ರಾಜಶೇಖರ ಮಾಗನೂರ ಶಿವರಾಜ ಸಜ್ಜನರ ವಿರುಪಾಕ್ಷಪ್ಪ ಬಳ್ಳಾರಿ ಶಿವರಾಜ ಅಗಡಿ ಎಂ.ಎಸ್. ಕೋರಿಶೆಟ್ಟರ ನಿರಂಜನ ತಾಂಡೂರ ಮಹಾಂತೇಶ ಮಳಿಮಠ ಪಿ.ಡಿ. ಶಿರೂರ ಬಿ. ಬಸವರಾಜ ಶಿವಬಸಪ್ಪ ಹಲಗಣ್ಣನವರ ಸುಭಾಷ್ ಹುರಳಿಕುಪ್ಪಿ ಅಶೋಕ ಹೇರೂರ ಆನಂದ ಅಟವಾಳಗಿ ಕೃಷ್ಣಮೂರ್ತಿ ಕುಲಕರ್ಣಿ ಶಿವಬಸವ ಮರಳಿಹಳ್ಳಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.