ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 21,396 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತೀರ್ಣ

ಹಾವೇರಿ ಜಿಲ್ಲೆಗೆ ‘ಎ’ ಗ್ರೇಡ್‌: ಸ್ನೇಹಾ ಹಾವೇರಿಗೆ ಶೇ 100ರಷ್ಟು ಫಲಿತಾಂಶ
Last Updated 9 ಆಗಸ್ಟ್ 2021, 15:09 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ 2021ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ 21,396 ವಿದ್ಯಾರ್ಥಿಗಳೂ ಉರ್ತೀರ್ಣರಾಗಿದ್ದು, ಜಿಲ್ಲೆಗೆ ‘ಎ’ ಗ್ರೇಡ್‌ ಫಲಿತಾಂಶ ಸಿಕ್ಕಿದೆ.

ಹಾವೇರಿ ತಾಲ್ಲೂಕಿನ ಕರ್ಜಗಿಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿನಿ ಸ್ನೇಹಾ ಸಿದ್ದಪ್ಪ ಹಾವೇರಿ ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 10,658 ಬಾಲಕರು ಮತ್ತು 10,738 ಬಾಲಕಿಯರು ಸೇರಿದಂತೆ ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಕನ್ನಡ ಮಾಧ್ಯಮದಲ್ಲಿ 15,613, ಆಂಗ್ಲ ಮಾಧ್ಯಮದಲ್ಲಿ 3418 ಹಾಗೂ ಉರ್ದು ಮಾಧ್ಯಮದಲ್ಲಿ 2365 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

9075 ಸರ್ಕಾರಿ ಶಾಲೆ, 8386 ಅನುದಾನಿತ ಶಾಲೆ, 3935 ಅನುದಾನರಹಿತ ಶಾಲೆಗಳ ಪೈಕಿ,ಗ್ರಾಮೀಣ ಪ್ರದೇಶದ 14,864 ಮತ್ತು ನಗರದ ಪ್ರದೇಶದ 6532 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ಪರಿಶ್ರಮಕ್ಕೆ ತಕ್ಕ ಫಲ:

ಈ ಬಾರಿ ನೂತನ ಪರೀಕ್ಷಾ ವಿಧಾನ ಇರುವ ಕಾರಣ ಮಕ್ಕಳಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಜುಲೈ 5 ಮತ್ತು 8ರಂದು ‘ಪೂರ್ವಭಾವಿ ಪರೀಕ್ಷೆ’ ನಡೆಸಲಾಗಿತ್ತು. ಮಕ್ಕಳ ಕಲಿಕೆಯ ದೃಢೀಕರಣಕ್ಕಾಗಿ ಹಾಗೂ ಹೊಸ ಪರೀಕ್ಷಾ ಕ್ರಮಕ್ಕೆ ಅಣಿಗೊಳಿಸಲು ಇದು ನೆರವಾಯಿತುಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್‌ ಆಫೀಸರ್‌ ಮಂಜಪ್ಪ ಆರ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ಒಎಂಆರ್‌ ಶೀಟ್‌ನಲ್ಲಿ ತಪ್ಪಿಲ್ಲದಂತೆ ಉತ್ತರಗಳನ್ನು ಗುರುತು (ಶೇಡ್‌) ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ರೂಢಿ ಮಾಡಿಸಲು ಜಿಲ್ಲಾಡಳಿತದ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕರ ಮೂಲಕ ಒಎಂಆರ್ ಶೀಟ್‌ ವಿತರಿಸಲಾಗಿತ್ತು. ಆನ್‌ಲೈನ್‌ ಪಾಠ, ಕ್ವಿಜ್‌, ಸಂವಾದ ಮುಂತಾದ ಕಾರ್ಯಕ್ರಮಗಳಿಂದ ಜಿಲ್ಲೆಗೆ ಉತ್ತಮ ಫಲಿತಾಂಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.

ಬೋಧಕರು ಮತ್ತು ಶಿಕ್ಷಣ ಅಧಿಕಾರಿಗಳ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಸಾಧನೆಯಿಂದ ಜಿಲ್ಲೆಗೆ ಉತ್ತಮ ಫಲಿತಾಂಶ ಸಿಕ್ಕಿದೆ
– ಅಂದಾನಪ್ಪ ವಡಗೇರಿ, ಡಿಡಿಪಿಐ, ಹಾವೇರಿ

ಗ್ರೇಡ್‌ವಾರು ಜಿಲ್ಲೆಯ ಫಲಿತಾಂಶ

ಗ್ರೇಡ್‌: ವಿದ್ಯಾರ್ಥಿಗಳ ಸಂಖ್ಯೆ

ಎ+ (90ರಿಂದ 100):1,748

ಎ (80ರಿಂದ 90):6,133

ಬಿ (60ರಿಂದ 80):9,366

ಸಿ (35ರಿಂದ 60):4,149

ಒಟ್ಟು:21,396

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT