ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು: ಸ್ವಾಮೀಜಿ ನಾಮಪತ್ರ ವಾಪಸ್; ಬಿಜೆಪಿ ನಿರಾಳ

ಹಿರಿಯ ಗುರುಗಳ ಸೂಚನೆ ಎಂದ ಶಿವಾಚಾರ್ಯ ಸ್ವಾಮೀಜಿ
Last Updated 1 ಡಿಸೆಂಬರ್ 2019, 13:13 IST
ಅಕ್ಷರ ಗಾತ್ರ

ಹಾವೇರಿ: ಹಿರೇಕೆರೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸೋಮವಾರ ತರಾತುರಿಯಲ್ಲಿ ನಾಮಪತ್ರ ಸಲ್ಲಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂಥಿಮಠದಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಇದೀಗ ನಾಮಪತ್ರ ವಾಪಸ್ ಪಡೆಯುವ ನಿರ್ಧಾರ ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಸ್ವಾಮೀಜಿ, ‘ಗುರು ಪರಂಪರೆಯ ವೃತ್ತಿಯಲ್ಲಿ ಪರಮೋಚ್ಛ ಸ್ಥಾನಕ್ಕೆ ಬಂದ ಮೇಲೆ ಅದಕ್ಕಿಂತ ದೊಡ್ಡ ಪದವಿ ಬೇಕಿಲ್ಲ ಎಂದೆನಿಸಿದೆ. ಹೀಗಾಗಿ, ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಕೈಬಿಟ್ಟಿದ್ದೇನೆ. ಹಿರಿಯ ಸ್ವಾಮೀಜಿಗಳ ಮಾರ್ಗದರ್ಶನದಂತೆ ನಾಮಪತ್ರ ಹಿಂಪಡೆಯುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದರು.

ಸ್ವಾಮೀಜಿ ನಾಮಪತ್ರ ಸಲ್ಲಿಸಿದ್ದಕ್ಕೆ ಅವರ ಭಕ್ತ ಸಮೂಹದಿಂದ ಬೇಸರ ವ್ಯಕ್ತವಾಗಿತ್ತು. ಕೆಲವರು ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ಹೊರಹಾಕಿದ್ದರು. ಅಲ್ಲದೇ, ತಮ್ಮ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮಠಕ್ಕೆ ಬರಬಹುದೆಂದು, ಸ್ವಾಮೀಜಿ ಬೆಳಿಗ್ಗೆಯೇ ಮಠವನ್ನೂ ತೊರೆದಿದ್ದರು.

‘ಉಪ ಚುನಾವಣೆಗೆ ಯಾವುದೇಸ್ವಾಮೀಜಿಯನ್ನೂ ಕಣಕ್ಕಿಳಿಸಬೇಡಿ’ ಎಂದುಪಂಚಪೀಠಗಳ ಸ್ವಾಮೀಜಿಗಳುಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದರು. ಆ ನಂತರ ಕುಮಾರಸ್ವಾಮಿ ಹಾಗೂ ಶಿವಾಚಾರ್ಯ ಸ್ವಾಮೀಜಿ ನಡುವೆ ಮಾತುಕತೆ ನಡೆದಿದ್ದು, ಕಣದಿಂದ ಹಿಂದೆ ಸರಿಯುವ ತೀರ್ಮಾನವಾಗಿದೆ ಎನ್ನಲಾಗಿದೆ.

ಲಿಂಗಾಯತ ಸಮುದಾಯದ ಪ್ರಾಬಲ್ಯವುಳ್ಳ ಹಿರೇಕೆರೂರು ಕ್ಷೇತ್ರದಲ್ಲಿ, ಸ್ವಾಮೀಜಿ ಸ್ಪರ್ಧೆಗೆ ಇಳಿದಿದ್ದರಿಂದ ಬಿಜೆಪಿಗೆ ಮತ ವಿಭಜನೆಯ ಭೀತಿ ಎದುರಾಗಿತ್ತು. ಇದೀಗ ಬಿ.ಸಿ.ಪಾಟೀಲ ನಿರಾಳರಾಗಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT