ಹಿರೇಕೆರೂರ: ‘ರೈತರಿಗೆ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರ 2026ರ ಅಧೀವೇಶನದಲ್ಲಿ ವಿದ್ಯುತ್ ಕಾಯಿದೆ ತಿದ್ದುಪಡಿ ಮಾಡಲು ಹೊರಟಿದೆ’ ಎಂದು ತಾಲ್ಲೂಕಿನ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೂರಮಹ್ಮದ್ ಹೇಳಿದರು.

ಪಟ್ಟಣದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಗುರುವಾರ ತಾಲ್ಲೂಕಿನ ಹೆಸ್ಕಾಂ ಅಧಿಕಾರಿಗಳು ಹಾಗೂ ನೌಕರರಿಂದ ಸಾಂಕೇತಿಕ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದ ಅವರು, ‘ಇಂಧನ ಇಲಾಖೆ ಸಾರ್ವಜನಿಕರ ಆಸ್ತಿ. ಇದನ್ನು ಖಾಸಗೀಕರಣಗೊಳಿಸಿ, ವಿದ್ಯುತ್ ಕಾಯಿದೆ ತಿದ್ದುಪಡಿ ಮಾಡಲು ಹೊರಟಿರುವುದರಿಂದ ಗ್ರಾಹಕರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದರು.

ತಾಲ್ಲೂಕಿನ ಹೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಟಿ.ಜಿ. ಕೆಂಚಣ್ಣನವರ, ಜಯಪ್ರಕಾಶ ಬಿ.ಎಸ್ ಮಾತನಾಡಿದರು. ಸತೀಶ ಅರಸಾಪುರ, ಖಾದರ್ ಬಾಷಾ ಕೊಕ್ಕರಗುಂದಿ, ಕೆ.ಜಿ. ಕಾಸಂಬಿ, ಡೇವಿಡ್ ಕಾಲಪಾಲ್, ಅಶೋಕ ಕುಮಾರ, ನಾಗರಾಜ ಜಿ, ಬಾಬುಲಾಲ್ ಸೈಕಲಗಾರ, ಶಂಭುಲಿಂಗ ಹುಚ್ಚಗೊಂಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.