ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರವರ್ಧಿತ ಅಕ್ಕಿಯಿಂದ ಅಡ್ಡ ಪರಿಣಾಮಗಳಿಲ್ಲ

ಆಹಾರ ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಹೇಳಿಕೆ
Last Updated 27 ಜುಲೈ 2022, 14:28 IST
ಅಕ್ಷರ ಗಾತ್ರ

ಹಾವೇರಿ: ‘ಸಾರವರ್ಧಿತ ಅಕ್ಕಿ (ಫೋರ್ಟಿಫೈಡ್‌ ರೈಸ್) ಇದು ಮಾನವ ನಿರ್ಮಿತ ಅಕ್ಕಿಯಾಗಿದ್ದು, ಹೆಚ್ಚು ಪೌಷ್ಟಿಕಾಂಶಯುಳ್ಳ ಅಕ್ಕಿಯಾಗಿದೆ. ಇದರಿಂದ ಶರೀರಕ್ಕೆ ಯಾವುದೇ ಹಾನಿ ಅಥವಾ ಅಡ್ಡ ಪರಿಣಾಮಗಳಾಗುವುದಿಲ್ಲ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಹುಬ್ಬಳ್ಳಿ ಭಾರತೀಯ ಆಹಾರ ನಿಗಮದ ಸಹೋಯೋಗದಲ್ಲಿ ಬುಧವಾರ ಜರುಗಿದ ಸಾರವರ್ಧಿತ ಅಕ್ಕಿಯ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ 291 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಕರ್ನಾಟಕ ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯೂ ಒಂದಾಗಿದೆ. ಸಾರವರ್ಧಿತ ಅಕ್ಕಿಯಲ್ಲಿ ಐರನ್, ಪೋಲಿಕ್ ಆಸಿಡ್, ಹಾಗೂ ವಿಟಮಿನ ಬಿ 12 ಇದೆ. ಸಾರವರ್ಧಿತ ಅಕ್ಕಿ ಸಾಧಾರಣ ಅಕ್ಕಿಯಂತೆಯೇ ರುಚಿಯಾಗಿರುತ್ತದೆ ಎಂದರು.

ಭಾರತದಲ್ಲಿ ಶೇ 67ರಷ್ಟು ಮಕ್ಕಳು, ಶೇ 57ರಷ್ಟು ಮಹಿಳೆಯರು ಹಾಗೂ ಶೇ 25ರಷ್ಟು ಪುರುಷರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಕಂಡುಬಂದಿದೆ. ಆದ್ದರಿಂದ ಸಾರವರ್ಧಿತ ಅಕ್ಕಿಯನ್ನು ಉಪಯೊಗಿಸುದರಿಂದ ರಕ್ತ ಹೀನತೆಯನ್ನು ನೀಗಿಸಬಹುದೆಂದು ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ವಿತರಿಸಲು ಯೋಜಿಸಿದೆ ಎಂದು ಹೇಳಿದರು.

ಭಾರತಿಯ ಆಹಾರ ನಿಗಮದ ವ್ಯವಸ್ಥಾಪಕರಾದ ಕೆ ನಾಜುನಾಯ್ಕೆ ಮಾತನಾಡಿ, ಭಾರತದಲ್ಲಿ ಶೇ 65ರಷ್ಟು ಜನರ ಅಕ್ಕಿಯನ್ನು ಮೂಲ ಆಹಾರವನ್ನಾಗಿ ಬಳಸುತ್ತಿದ್ದಾರೆ. ಆದ್ದರಿಂದ ಸಾರವರ್ಧಿತ ಅಕ್ಕಿಯನ್ನು ಬಳಸುವುದರಿಂದ ರಕ್ತ ಹೀನತೆ ಪ್ರಕರಣಗಳು ಕಡಿಮೆಯಾಗ ಬಹುದೆಂದು ಅಕ್ಕಿಯನ್ನು ಬಳಸಲು ಸರ್ಕಾರ ಉತ್ತೆಜಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯೆಕ್ತಿಯಾಗಿ ಭಾರತಿಯ ಆಹಾರ ನಿಗಮ ಗುಣಮಟ್ಟ ನಿಯಂತ್ರಕರಾದ ಮೋಹಿನುದ್ದಿನ್ ಭಾಗವಹಿಸಿದ್ದರು. ಚೈತನ್ಯ ಸಂಸ್ಥೆಯ ಗ್ರಾಹಕ ಮಾಹಿತಿ ಕೇಂದ್ರದ ನಿರ್ದೆಶಕ ಎಸ್.ಎಚ್.ಮಜೀದ್ ಹಾಗೂ ಸಹಾಯಕ ನಿರ್ದೆಶಕರಾದ ಕುಮಾರ ವಡ್ಡನಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT