ಹಾವೇರಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಮೂವರಿಗೆ ಕೋವಿಡ್–19 ದೃಢಗೊಂಡಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಮುಂಬೈನಿಂದ ಹಾವೇರಿಗೆ ಬಂದಿದ್ದ ಮೂಲತಃ ಗಣಜೂರಿನ 50 ವರ್ಷದ ಪಿ-5002 ಮಹಿಳೆ ಹಾಗೂ 45 ವರ್ಷದ ಸಂಗೂರಿನ ಪಿ-5003 ಪುರುಷ ಹಾಗೂ 27 ವರ್ಷದ ಗುತ್ತಲದ ಪಿ-5004 ಮಹಿಳೆಗೆ ಶನಿವಾರ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಗಣಜೂರು ಹಾಗೂ ಸಂಗೂರಿನ ಸೋಂಕಿತರು ಮಹಾರಾಷ್ಟ್ರ ರಾಜ್ಯದಿಂದ ಹಾವೇರಿಗೆ ಬಂದು ನಗರದ ವಿದ್ಯಾರ್ಥಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಿದ್ದರು. ಗುತ್ತಲದ 27 ವರ್ಷದ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಹಾವೇರಿ ಜಿಲ್ಲೆಯ ಗುತ್ತಲಕ್ಕೆ ಆಗಮಿಸಿದ್ದರು. ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ 21 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಆರು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂಡಿದ್ದಾರೆ. 15 ಪ್ರಕರಣಗಳು ಸಕ್ರಿಯವಾಗಿವೆ.

ಪ್ರವಾಸ ಹಿನ್ನೆಲೆ:

ಮೂಲತಃ ಗಣಜೂರ ಗ್ರಾಮದ 55 ವರ್ಷದ P-5002 ಮಹಿಳೆ ಮಹಾರಾಷ್ಟ್ರ ರಾಜ್ಯದ ಥಾಣೆಯಿಂದ ಬಂದು ಹಾವೇರಿ ನಗರದಲ್ಲಿ ಸಾಂಸ್ಥಿಕ ಕ್ವಾರಂಟೈನ್ಲ್ಲಿ ಇದ್ದವರಾಗಿದ್ದಾರೆ. ಈಕೆಯ ಪತಿ ಹಾಗೂ ಮಗ ಮಹಾರಾಷ್ಟ್ರ ರಾಜ್ಯದ ಮುಂಬೈನ ಥಾಣೆ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ಗಂಡ ಮರಣ ಹೊಂದಿರುತ್ತಾನೆ. ಈತನ ಮರಣ ಪ್ರಮಾಣ ಪತ್ರ ಹಾಗೂ ಇತರ ದಾಖಲೆಗಳನ್ನು ಪಡೆದುಕೊಳ್ಳಲು ಮುಂಬೈಗಿಗೆ ಹೋಗಿರುವ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆಯಾದ ಕಾರಣ ಅಲ್ಲೇ ಉಳಿದಿರುತ್ತಾಳೆ.

ಅಂತರ ರಾಜ್ಯ ಕಾರ್ಮಿಕರ ಓಡಾಟ ಆರಂಭವಾದಾಗ ಲಾರಿ ಮೂಲಕ ಜಿಲ್ಲೆಗೆ ಆಗಮಿಸಿದ್ದು, ಲಾರಿಯಿಂದ ಇಳಿದು ನಡೆದು ಬರುವಾಗ ಹಾವೇರಿಯಲ್ಲಿ ಸ್ಥಳೀಯ ಆರೋಗ್ಯ ಸಿಬ್ಬಂದಿ ಸದರಿ ಮಹಿಳೆಯನ್ನು ಪ್ರಶ್ನಿಸಿ ಮಹಾರಾಷ್ಟ್ರದಿಂದ ಬಂದ ಹಿನ್ನಲೆ ಕಾರಣ ಮೇ 30ರಂದು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಕ್ವಾರಂಟೈನ್ ಸೆಂಟರ್ಗೆದಾಖಲಿಸಿರುತ್ತಾರೆ. ಜೂನ್ 1ರಂದು ಗಂಟಲು ದ್ರವ ತೆಗೆದು ಲ್ಯಾಬ್ಗೆ ಕಳುಹಿಸಲಾಗಿತ್ತು. ಜೂನ್ 5ರಂದು ಸಂಜೆ ಸೋಂಕು ದೃಢಪಟ್ಟಿದೆ.

ಲಾರಿ ಮೂಲಕ ಪ್ರಯಾಣ:

ಮೂಲತಃ ಸಂಗೂರಿನ 45 ವರ್ಷದ P-5003 ಪುರುಷ ಅರ್ಧಾಪೂರ ನಾಂಡಿಡ್ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ಟೆಕ್ನಿಕಲ್ ಸೂಪರ್ ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಲಾಕ್ಡೌನ್ ಸಡಿಲಿಕೆ ನಂತರ ಲಾರಿಯಲ್ಲಿ ಮರಳಿ ಹಾವೇರಿ ಜಿಲ್ಲೆಯ ಸ್ವಂತ ಗ್ರಾಮಕ್ಕೆ ಮೇ 27ರಂದು ಆಗಮಿಸಿರುತ್ತಾನೆ. ಈತನನ್ನು ಹಾವೇರಿ ನಗರದ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ (ಕೆ.ಎಸ್.ಆರ್.ಟಿ.ಸಿ. ಡಿಪೋಪೊ ಹತ್ತಿರ) ಕ್ವಾರಂಟೈನ್ ಸೆಂಟರ್ನಲ್ಲಿ ದಾಖಲಿಸಿರುತ್ತಾರೆ. ಜೂನ್ 1ರಂದು ಗಂಟಲು ದ್ರವ ತೆಗೆದು ಪರೀಕ್ಷೆಗಾಗಿ ಲ್ಯಾಬ್ಗೆ ಕಳುಹಿಸಲಾಗಿದ್ದು, ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಮಂಡ್ಯದಿಂದ ಬಂದ ಮಹಿಳೆ:

27 ವರ್ಷದ P-5004 ಮಹಿಳೆಯಾಗಿದ್ದು ಸುಮಾರು 9 ವರ್ಷದಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 5ರಂದು ಬೆಳಿಗ್ಗೆ ತನ್ನ ಗಂಡನ ಜೊತೆಗೆ ಮೋಟರ್ ಬೈಕ್ನಲ್ಲಿ ಭದ್ರಾವತಿ, ಶಿವಮೊಗ್ಗ, ರಾಣೆಬೆನ್ನೂರ ಮಾರ್ಗವಾಗಿ ಮೇ 6ರಂದು ಗುತ್ತಲಕ್ಕೆ ಗಂಡನ ಮನೆಗೆ ಬಂದಿದ್ದಾರೆ. ಮರಳಿ ಕರ್ತವ್ಯಕ್ಕೆ ಹೋಗುವ ಸಲುವಾಗಿ ತನ್ನ ಗಂಡನೊಂದಿಗೆ ಜೂನ್ 1ರಂದು ಮಧ್ಯಾಹ್ನ ಮೋಟರ್ ಬೈಕ್ನಲ್ಲಿ ಬಂದು ಜಿಲ್ಲಾ ಆಸ್ಪತ್ರೆಗೆ ಕೋವಿಡ್-19 ಪರೀಕ್ಷೆ ಮಾಡಲು ವಿನಂತಿಸಿರುತ್ತಾಳೆ. ಆ ದಿನವೇ ಆಕೆಯ ಗಂಟಲುದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂನ್ 5ರಂದು ಸಂಜೆ ಪಾಸಿಟಿವ್ ವರದಿ ಬಂದಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.