ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ

Published 6 ಅಕ್ಟೋಬರ್ 2023, 14:21 IST
Last Updated 6 ಅಕ್ಟೋಬರ್ 2023, 14:21 IST
ಅಕ್ಷರ ಗಾತ್ರ

ಹಿರೇಮಾಗನೂರು (ತುಮ್ಮಿನಕಟ್ಟಿ): ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ  ಕಾಲುಬಾಯಿ ಲಸಿಕೆ ಹಾಕಿಸಬೇಕು ಎಂದು ತಾಲ್ಲೂಕು ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಂಜನಗೌಡ ಪಾಟೀಲ ಹೇಳಿದರು.

ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕಿಗೆ ಚೈತನ್ಯ ನೀಡುವ ರಾಸುಗಳ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಕಷ್ಟದ ಕಾಲದಲ್ಲಿ ಕೈ ಹಿಡಿದು ನಮ್ಮ ಏಳಿಗೆಗೆ ಸಹಕಾರ ನೀಡುವ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಹಿರಿಯ ಪಶು ವೈದ್ಯಾಧಿಕಾರಿ ಯುವರಾಜ್ ಚವ್ಹಾಣ, ಪಶು ಪರಿವೀಕ್ಷಕ ಡಿ.ಕುಮಾರ ಹಾಗೂ ಇಲಾಖೆಯ ಸಿಬ್ಬಂದಿ ಗ್ರಾಮದ ಒಟ್ಟು 317 ರಾಸುಗಳಿಗೆ ಲಸಿಕೆ ಹಾಕಿದರು.

ಜೆ.ಎಂ.ಪಾಟೀಲ್, ಭೀಮನಗೌಡ ಮುದಿಗೌಡ್ರ, ಶಿವನಗೌಡ ಅಯ್ಯಳ್ಳವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT