ಸವಣೂರು ತಾಲ್ಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ತೇವಾಂಶ ಹೆಚ್ಚಾಗಿ ನಂದಿಹಳ್ಳಿ ಗ್ರಾಮದ ಹೊಲವೊಂದರಲ್ಲಿ ಭೂಮಿಯಲ್ಲಿಯೆ ನಲುಗಿರುವ ಗೋವಿನಜೋಳ ಬೆಳೆ.
ವರದಾ ನದಿ ನಿರೀನಮಟ್ಟ ಅಪಾಯದ ರೀತಿಯಲ್ಲಿ ಹರಿಯುತ್ತಿಲ್ಲ. ಅಪಾಯ ಎದುರಿಸುವ ಮನ್ನಂಗಿ, ಬರದೂರ, ಕುಣಿಮೆಳ್ಳಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೆಟ್ಟಿ ಮುನ್ನೆಚ್ಚರಿಕೆ ಕ್ರಮವಾಗಿ ಜಾಗೃತಿ ಮೂಡಿಸಲಾಗಿದೆ. ಕುಣ್ಣಿಮೆಳ್ಳಿಹಳ್ಳಿ ಸ್ಥಳಾಂತರ (ಸಿಪ್ಪಟಿಂಗ್) ಕಾರ್ಯ ಕೈಗೊಳ್ಳಲಾಗಿದೆ. ಮನ್ನಂಗಿ, ಮೆಳ್ಳಾಗಟ್ಟಿ ಹಾಗೂ ಬರದೂರ ಗ್ರಾಮಗಳ ಸ್ಥಳಾಂತರಕ್ಕೆ ಯೋಜನೆಯೊಂದಿಗೆ ಕಾರ್ಯ ಆರಂಬಿಸಲಾಗುತ್ತಿದೆ.
ಭರತಕುಮಾರ ಕೆ.ಎನ್ ತಹಶೀಲ್ದಾರ್
ವರದಾ ತೀರದ ತಾಲ್ಲೂಕಿನ ಗ್ರಾಮಗಳ ಸಾರ್ವಜನಿಕರು ಹಾಗೂ ರೈತರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು. ತಪ್ಪಿದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ನೇರ ಹೊಣೆಗಾರರು. ಬೇಳೆ ಹಾನಿಯಾದರೆ ಪರಿಹಾರ ನೀಡುತ್ತಾರೆ. ಪ್ರಾಣ ಹಾನಿಗೆ ಯಾರು ಹೊಣೆ?