ಮತಗಟ್ಟೆಗಳ ಪರಿಶೀಲನೆ: ಪುರಸಭೆ ಚುನಾವಣೆ ಸಿದ್ಧತೆ

7

ಮತಗಟ್ಟೆಗಳ ಪರಿಶೀಲನೆ: ಪುರಸಭೆ ಚುನಾವಣೆ ಸಿದ್ಧತೆ

Published:
Updated:
Deccan Herald

ಹಾನಗಲ್: ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಶನಿವಾರ ಪಟ್ಟಣದ 23 ಮತಗಟ್ಟೆಗಳನ್ನು ತಹಶೀಲ್ದಾರ್‌ ಶಕುಂತಲಾ ಚೌಗಲಾ ನೇತೃತ್ವದ ತಂಡ ಪರಿಶೀಲನೆ ನಡೆಸಿತು.

ಹಾನಗಲ್‌ ಪುರಸಭೆಯ 23 ವಾರ್ಡ್‌ಗಳಿಗೆ ಇದೇ 29 ರಂದು ಮತದಾನ ನಡೆಯಲಿದ್ದು, ಪ್ರತಿ ವಾರ್ಡ್‌ಗೆ ಒಂದು ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಮತಗಟ್ಟೆಗಳ ಮೂಲ ಸೌಲಭ್ಯಗಳ ಪರಿಶೀಲನೆಗಾಗಿ ತಹಶೀಲ್ದಾರ್‌ ಚೌಗಲಾ, ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌.ಬಜಕ್ಕನವರ, ಸಿಪಿಐ ರೇವಣ್ಣ ಕಟ್ಟಿಮನಿ, ಪಿಎಸ್ಐ ಗುರುರಾಜ ಮೈಲಾರ, ಚುನಾವಣಾ ಅಧಿಕಾರಿ ಜಾವೀದ್‌ ಮುಲ್ಲಾ, ಮಹೇಶ ನಾಯ್ಕ, ಶ್ರೀಧರ.ಕೆ ಅವರು ಮತಗಟ್ಟೆಗಳಿಗೆ ಭೇಟಿ ನೀಡಿದ್ದರು.

ಬಳಿಕ ತಹಶೀಲ್ದಾರ್‌ ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಸಭೆ ಆಯೋಜಿಸಲಾಗಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಚುನಾವಾಣೆ ವೇಳಾಪಟ್ಟಿ, ಪ್ರಚಾರ, ರ‍್ಯಾಲಿಗೆ ಸಂಬಂಧಿಸಿದ ಅನುಮತಿ ಪಡೆಯಲು ಮತ್ತು ನಾಮಪತ್ರ ಸಲ್ಲಿಕೆಯ ನಿಯಮಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ನಾಮಪತ್ರ ಸಲ್ಲಿಕೆ: ಆ. 10 ರಿಂದ 17ರ ತನಕ ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. 1 ರಿಂದ 12 ವಾರ್ಡ್‌ಗಳ ಅಭ್ಯರ್ಥಿ ನಾಮಪತ್ರವನ್ನು ತಹಶೀಲ್ದಾರ್‌ ಕೊಠಡಿಯಲ್ಲಿ ಶಕುಂತಲಾ ಚೌಗಲಾ ಸ್ವೀಕರಿಸಲಿದ್ದಾರೆ. 13 ರಿಂದ 23 ವಾರ್ಡ್‌ಗಳ ನಾಮಪತ್ರಗಳನ್ನು ಇದೇ ಕಚೇರಿಯ ಮತ್ತೊಂದು ಕೊಠಡಿಯಲ್ಲಿ ಚುನಾವಣಾ ಅಧಿಕಾರಿ ಜಾವೀದ್‌ ಮುಲ್ಲಾ ಸ್ವೀಕರಿಸಲಿದ್ದಾರೆ.

‘18ರಂದು ನಾಮಪತ್ರಗಳ ಪರಿಶೀಲನೆ, 20ರಂದು ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಮತ್ತು 29ರಂದು ಮತದಾನ ನಡೆಯಲಿದೆ. ಪ್ರತಿ ಮತಗಟ್ಟೆಗೆ 4 ಚುನಾವಣಾ ಸಿಬ್ಬಂದಿ ಇರಲಿದ್ದು, ಇವಿಎಂ ಯಂತ್ರ ಬಳಸಲಾಗುತ್ತಿದೆ, ಸೆಪ್ಟೆಂಬರ್ 1ರಂದು ತಹಶೀಲ್ದಾರ್‌ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ‌’ ಎಂದು ತಹಶೀಲ್ದಾರ್‌ ಚೌಗಲಾ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !