ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವಕರು ಸ್ವ–ಉದ್ಯೋಗಕ್ಕೆ ಮುಂದಾಗಲಿ’

Last Updated 11 ಡಿಸೆಂಬರ್ 2020, 15:22 IST
ಅಕ್ಷರ ಗಾತ್ರ

ಹಾವೇರಿ: ‘ಶಿಬಿರಾರ್ಥಿಗಳು ತಮ್ಮ ಜೀವನದಲ್ಲಿ ಉದ್ಯಮಶೀಲತೆಯ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಸ್ವ-ಉದ್ಯೋಗದ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಾಯಿಸಲು ಮುಂದಾಗಬೇಕು’ ಎಂದು ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಂಸ್ಥೆಯ ನಿರ್ದೇಶಕ ಡಾ.ವೀರಣ್ಣ ಎಸ್.ಎಚ್. ಹೇಳಿದರು.

ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‍ನಲ್ಲಿ ಬುಧವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಸಹಯೋಗದಲ್ಲಿ ಜರುಗಿದ ‘30 ದಿನಗಳ ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‌ವರ್ಕಿಂಗ್‌ನ ಉದ್ಯಮಶೀಲತಾ ಕೌಶಲಾಭಿವೃದ್ಧಿ ತರಬೇತಿ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾವಣಗೆರೆ ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಆರ್.ಪಿ.ಪಾಟೀಲ ಮಾತನಾಡಿ, ‘ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಾವು ನೀವೆಲ್ಲರೂ ಕೂಡಿ ಹೋಗಲಾಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಿನಾಯಕ ಜೋಷಿ, ‘ಪಿ.ಎಮ್.ಇ. ಜಿ. ಪಿ. ಯೋಜನೆ ಬಗ್ಗೆ ಮಾಹಿತಿ ನೀಡಿ ಉತ್ತಮ ತರಬೇತಿ ಹೊಂದಿದ ಶಿಬಿರಾರ್ಥಿಗಳು ತಮ್ಮ ಜೀವನಲ್ಲಿ ಯಶಸ್ವಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಹಾವೇರಿ ಸಿಡಾಕ್ ಸಂಸ್ಥೆಯ ಜಂಟಿ ನಿರ್ದೇಶಕ ಆರ್.ಪಿ. ಪಾಟೀಲ್, ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಚನ್ನಪ್ಪ ಬಿ., ಕಂಪ್ಯೂಟರ್ ಹಾರ್ಡ್‍ವೇರ್ ಮತ್ತು ನೆಟ್‌ವರ್ಕಿಂಗ್‌ನ ಪ್ರಾಯೋಗಿಕ ತರಬೇತಿ ನೀಡಿದ ಇ. ಮತ್ತು ಸಿ. ವಿಭಾಗದ ಮುಖ್ಯಸ್ಥರಾದ ಗೀತಾ, ರವಿಕುಮಾರ ಹಾಗೂ ಮೋಹನ್ ದೇಸಾಯಿ, ತರಬೇತುದಾರರಾದ ಬಸವರಾಜ ಜಿ.ಬಿ. ಮತ್ತು ಶಿವಾನಂದ ಎಚ್. ತಳವಾರ ಹಾಗೂ ಬಸವರಾಜ ಜಿ.ಬಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT