ಹಾವೇರಿ: ‘ಸಾವಿರಾರು ಅಂಧ ಮಕ್ಕಳಿಗೆ ನೆಲೆ ಒದಗಿಸಿದ ಗಾನಯೋಗಿ ಪಂಡಿತ ಪುಟ್ಟರಾಕ ಕವಿ ಗಾವಾಯಿಗಳು ಆದರ್ಶ ಪಾಲಿಸುವ ಮೂಲಕ ಎಲ್ಲ ಅಂಧರು ಇತರರಿಗೆ ಕಣ್ಣಾಗಬಹುದಾಗಿದೆ’ ಎಂದು ಶಿಕ್ಷಕ ರವಿ ಗುಡಿಸಾಗರ ಹೇಳಿದರು. ನಗರದ ಇಜಾರಿ ಲಕಮಾಪುರದಲ್ಲಿರುವ ಜ್ಞಾನ ಜ್ಯೋತಿ ಅಂಧರ ಶಾಲೆಯಲ್ಲಿ ಜೇಸಿ ಸಂಸ್ಥೆ ನಗರ ಘಟಕ ಭಾನುವಾರ ಸಂಜೆ ಆಯೋಜಿಸಿದ್ದ ನೂತನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಣ್ಣಿರುವವರಿಗಿಂತ ಕಣ್ಣಿಲ್ಲದವರೇ ಸೂಕ್ಷ್ಮಗ್ರಾಹಿಗಳು ಆಗಿರುತ್ತಾರೆ. ಕಣ್ಣಿಲ್ಲವೆಂದು ದುಃಖಿಸಿದೇ ಜೀವನದಲ್ಲಿ ಮುನ್ನುಗ್ಗಿದರೆ, ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಜೇಸಿ ಅಧ್ಯಕ್ಷ ಎಸ್.ಎಸ್. ನಡುವಿನಮಠ ಮಾತನಾಡಿ, ಬಹುದಿನದ ಕನಸಾಗಿದ್ದ ಈ ಆಸೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳ ಸಹಕಾರದಿಂದ ಇಂದು ಸಾಕಾರವಾಗಿದೆ. ಮುಂಬರುವ ದಿನಗಳಲ್ಲಿ ಇಂಥ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಪತ್ರಕರ್ತ ವಿಜಯ್ ಹೂಗಾರ, ಸಂಸ್ಥೆಯ ಉಪಾಧ್ಯಕ್ಷ ಎಂ.ಎಂ.ಹನುಮನಹಳ್ಳಿ ಮಾತನಾಡಿದರು. ವರ್ಷಾಚರಣೆ ಕಾರ್ಯಕ್ರಮದಲ್ಲಿ ಅಂಧ ವಿದ್ಯಾರ್ಥಿಗಳೇ ಕೇಕ್ ಕತ್ತರಿಸುವ ಮೂಲಕ ನೂತನ ವರ್ಷಾಚರಣೆಗೆ ನಾಂದಿ ಹಾಡಿದ್ದು ವಿಶೇಷವಾಗಿತ್ತು. ನಂತರ ಜೇಸಿ ಸಂಸ್ಥೆ ಪದಾಧಿಕಾರಿಗಳು ಮಕ್ಕಳಿಗೆ ಕೇಕ್, ಸಿಹಿ ವಿತರಿಸಲಾಯಿತು.

ಅಂಧ ಶಾಲೆಯ ಮಕ್ಕಳು ಸಹ ವರ್ಷಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡು ಕವನ ವಾಚನ, ಮಕ್ಕಳ ಹನಿಗವನ, ಸಂಗೀತ, ಕಂಪ್ಯೂಟರ್ ಬಳಕೆ ನೋಡಿ ವಿಸ್ಮಿತರಾದರು.
ಜೆ.ಎನ್.ಪಟೇಲ, ರಮೇಶ ಪಾಟೀಲ, ಜಿ.ಎಸ್.ಹತ್ತಿಮತ್ತೂರ, ಗುದಗಿ, ಹಿರೇಮಠ, ಮುರಗೇಶ ಹುಂಬಿ, ಎಂ.ಬಿ.ನಾಗಲಾಪುರ, ಎಸ್.ಬಿ. ದೊಡ್ಡಮನಿ, ರಮೇಶ ಕಡಕೋಳ, ಆರ್.ಸಿ.ನಂದಿಹಳ್ಳಿ, ವಸಂತ ಮಡ್ಲೂರ, ಹನುಮಂತ ನಾಯ್ಕ, ನಾಗರಾಜ ಗಡಗಿ, ಗಾಯತ್ರಿ ಹುಂಬಿ, ನಮೃತಾ ನಾಗಲಾಪೂರ, ವಿರೂಪಾಕ್ಷ ಹಾಲಪ್ಪನವರ, ವಿನಯ ಸಾಲಿಮಠ, ಕುಲದೀಪ ಕುಲಕರ್ಣಿ, ಕಿರಣ ಮಾಸಣಗಿ, ಸಿದ್ದಣ್ಣ ಮೆಣಸಿನಹಾಳ, ಮುರಗೇಶ ಅಂಗಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾಂಚನಾ ನಡುವಿನಮಠ ಜೇಸಿ ವಾಣಿ ಓದಿದರು. ಪ್ರದೀಪ ಪಾಟೀಲ ವಂದಿಸಿದರು.

ಆರೋಗ್ಯ ತಪಾಸಣೆ 23ಕ್ಕೆ
ಬ್ಯಾಡಗಿ: ಇಲ್ಲಿಯ ಬಂಗಾರಮ್ಮ ಹಾಲಯ್ಯ ಬೂದಿಹಾಳಮಠ ಅವರ ಸ್ಮರಣಾರ್ಥ ಜ.23ರಂದು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಪಟ್ಟಣದ ಬಿಇಎಸ್‌ಎಂ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ ಬೂದಿಹಾಳಮಠ ಈ ವಿಷಯ ತಿಳಿಸಿದರು. ಶಿವಯೋಗಿ ಬಣಕಾರ, ಬಿ.ಎಂ.ಜಗದೀಶ, ಡಾ.ಸತೀಶ ಪಾಟೀಲ, ಡಾ.ಎಸ್.ಎನ್.ನಿಡಗುಂದಿ, ಗಣ್ಯ ವರ್ತಕರಾದ ಜಯದೇವ ಶಿರೂರ, ದತ್ತಾತ್ರೇಯ ಸಾಳುಂಕೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.