ಸವಣೂರ: ಸ್ಥಳೀಯ ಪುರಸಭೆಯ ಅವ್ಯವಹಾರ, ನಿಷ್ಕ್ರಿಯತೆ ವಿರುದ್ಧ ಸತತ ಪ್ರತಿಭಟನೆ ಕೈಗೊಂಡಿದ್ದ ಸಾರ್ವಜನಿಕರು, ಅಂತಿಮವಾಗಿ ಅಧಿಕಾರಿಗಳ ಹೆಸರಲ್ಲಿ ದಶಪಿಂಡ ಸಮಾರಾಧನೆ ಕೈಗೊಳ್ಳುವ ಮೂಲಕ ಸೋಮವಾರ ವಿನೂತನವಾಗಿ ಪ್ರತಿಭಟಿಸಿದರು.

ಮಹಾದೇವ ಮಹೇಂದ್ರಕರ ನೇತೃತ್ವದಲ್ಲಿ ಎರಡು ಹಂತಗಳಲ್ಲಿ 34 ದಿನಗಳ ಕಾಲ ಅರೆಬೆತ್ತಲೆ ಪ್ರತಿಭಟನೆ, ಪ್ರತಿಕೃತಿ ದಹನ, ಅರಣ್ಯವಾಸಿಗಳ ರೂಪಕಗಳೊಂದಿಗೆ ಸತ್ಯಾಗ್ರಹ ನಡೆಸಲಾಗಿತ್ತು. ಇದಾವುದಕ್ಕೂ ಅಧಿಕಾರಿಗಳು ಜಗ್ಗದ ಕಾರಣ ಸೋಮವಾರ ದಶಪಿಂಡ ಸಮಾರಾಧನೆ ಕೈಗೊಂಡರು.ಸರ್ಕಾರ, ಅಧಿಕಾರಿಗಳು ಹಾಗೂ ಪುರಸಭೆಯ ಹೆಸರಿನಲ್ಲಿ ಪಿಂಡ ಪ್ರದಾನ ಮಾಡಿ, ತಿಲ ತರ್ಪಣ ನೀಡಿ ಪ್ರದಕ್ಷಿಣೆ, ನಮಸ್ಕಾರ ಮಾಡಿದ ಪ್ರತಿಭಟನಾಕಾರರು, ಕೇಶಮುಂಡನ ಸೇರಿದಂತೆ ದಶಪಿಂಡ ಸಮಾರಾಧನೆಯ ಪ್ರತಿಯೊಂದು ವಿಧಿ ವಿಧಾನಗಳನ್ನೂ ವಿಧ್ಯುಕ್ತವಾಗಿ ನೆರವೇರಿಸಿದರು.

ನರಸಿಂಹಾಚಾರ್ಯ ದಶಪಿಂಡ ಸಮಾರಾಧನೆಯ ವಿಧಿ–ವಿಧಾನಗಳನ್ನು ನಿರ್ವಹಿಸಿದರು. ಈ ಹಂತದಲ್ಲಿ ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರಿಗೆ 34ನೇ ಬಾರಿ ಮನವಿ ಸಲ್ಲಿಸಿದರು. ಪುರಸಭೆಯ ಎಲ್ಲ ಅವ್ಯವಹಾರಗಳ ಸಮಗ್ರ ತನಿಖೆ ನಡೆಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಹಾದೇವ ಮಹೇಂದ್ರಕರ, ರಮೇಶ ಅಗಸರ, ಮಾರುತಿ ಕೇಶಮುಂಡನ ದೊಂದಿಗೆ ಪಿಂಡಪ್ರಧಾನದ ವಿಧಿ ವಿಧಾನಗಳನ್ನು ನಿರ್ವಹಿಸಿದರು.

ಕರವೆ ಘಟಕದ ಅಧ್ಯಕ್ಷ ಪರಶುರಾಮ್ ಈಳಿಗೇರ ಸೇರಿದಂತೆ ಹಲವಾರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ನಾಗರಾಜ ಬಾಳಿಕಾಯಿ, ಎಮ್. ಐ ರಾಶಿನಕರ್, ಮಂಜು ಕರ್ನೂಲ ಸೇರಿದಂತೆ ಹಲ ವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.