‘ಆರೋಗ್ಯ ಭಾಗ್ಯವೇ ಸರ್ವ ಶ್ರೇಷ್ಠ’

7

‘ಆರೋಗ್ಯ ಭಾಗ್ಯವೇ ಸರ್ವ ಶ್ರೇಷ್ಠ’

Published:
Updated:
Deccan Herald

ಹಾರೋಹಳ್ಳಿ(ಕನಕಪುರ): ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಶ್ರೇಷ್ಠವಾದದ್ದು ಎಂದು ಹಾರೋಹಳ್ಳಿ ರೋಟರಿ ಘಟಕದ ಅಧ್ಯಕ್ಷ ಏಡುಮಡು ಕಾಂತರಾಜು ತಿಳಿಸಿದರು.

ತಾಲ್ಲೂಕಿನ ಆರ್‌.ಎಚ್‌.ಎಸ್‌ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಉಚಿತ ಚರ್ಮರೋಗ ತಪಾಸಣೆ ಮತ್ತು ಔಷಧಿ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ಹಣ, ಆಸ್ತಿ ಕಳೆದುಕೊಂಡರೂ ಮತ್ತೆ ಸಂಪಾದಿಸಬಹುದು. ಆದರೆ, ಆರೋಗ್ಯ ಕಳೆದುಕೊಂಡರೆ ಸಂಪಾದಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಣ್ಣ ಆರೋಗ್ಯ ಸಮಸ್ಯೆ ಬಂದಾಗ ವೈದ್ಯರ ಬಳಿ ಹೋಗದ ನಿರ್ಲಕ್ಷ್ಯ ಮಾಡುತ್ತೇವೆ. ಅದೇ ದೊಡ್ಡ ಮಾರಕವಾದಾಗ ಎಲ್ಲ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಕೊನೆಗೆ ದೇವರ ಮೇಲೆ ಭಾರ ಹಾಕುತ್ತೇವೆ ಎಂದು ಅಭಿಪ್ರಾಯಪಟ್ಟರು.

‘ಪ್ರಕೃತಿ ನಮಗೆ ಎಲ್ಲ ನೀಡಿದೆ ಆದರೆ ನಾವು ಸಮಯಕ್ಕೆ ಏನನ್ನೂ ಮಾಡುವುದಿಲ್ಲ. ಆರೋಗ್ಯ ಸಮಸ್ಯೆಯಾದಾಗ ವೈದ್ಯರ ಸಲಹೆ ಪಡೆದುಕೊಳ್ಳಬೇಕು ’ ಎಂದು ಸಲಹೆ ನೀಡಿದರು.

ಶಿಬಿರಾರ್ಥಿಗಳನ್ನು ಪರೀಕ್ಷಿಸಿದ ಡಾ.ಪವನ್‌ ಕುಮಾರ್ ಮಾತನಾಡಿ, ಮೈ ಮೇಲೆ ಉಂಟಾಗುವ ಗಾಯಗಳು, ಹುಣ್ಣುಗಳು ಚರ್ಮ ಕಾಯಿಲೆಗಳಲ್ಲ ಎಂದು ತಿಳಿಸಿದರು.

ಕೆಲವು ಚರ್ಮ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದರು.

ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ 300ಕ್ಕೂ ಹೆಚ್ಚಿನ ಜನರು ಶಿಬಿರಕ್ಕೆ ಬಂದು, ತಪಾಸಣೆ ಮಾಡಿಸಿಕೊಂಡರು. ಉಚಿತವಾಗಿ ಔಷಧಿ ನೀಡಲಾಯಿತು.

ರೋಟರಿ ಸಂಸ್ಥೆಯ ವತಿಯಿಂದ ಶಿಬಿರ ಆಯೋಜನೆ ಮಾಡಲಾಗಿತ್ತು. ವೈದ್ಯರಾದ ಡಾ. ರಾಧಿಕ.ಎಸ್‌.ಆರ್‌, ಡಾ.ಪ್ರಿಯಾಂಕ, ಡಾ.ಎಂ.ಎನ್‌.ಕಲ್ಪನಶ್ರೀ, ಶಾಲೆಯ ಮುಖ್ಯ ಶಿಕ್ಷಕ ನಂಜುಂಡಸ್ವಾಮಿ, ರೋಟರಿ ಮಾಜಿ ಅಧ್ಯಕ್ಷರಾದ ಡಾ. ಪ್ರಾಣೇಶ್‌, ಮಹಮ್ಮದ್‌ ಏಜಾಸ್‌, ಕಾರ್ಯದರ್ಶಿ ಭರತ್‌.ಎಚ್‌, ಖಜಾಂಚಿ ಮುದ್ದೇಗೌಡ, ಸದಸ್ಯರಾದ ಆನಂದ್‌, ಶ್ರೀನಿವಾಸ, ಕೃಷ್ಣ, ಹೊನ್ನೇಗೌಡ, ಮಹಮ್ಮದ್‌ ನದೀಮ್‌, ಲಕ್ಷ್ಮೀಪತಿ, ಚಂದ್ರು, ದುರ್ಗೇಶ್‌, ಸುನಿಲ್‌, ನರಸಿಂಹ, ಕಿರಣ್‌, ಸುನಿಲ್‌, ಚರಣ್‌, ಅಜಯ್‌, ದೇವರಾಜು, ವೆಂಕಟೇಶ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !