ಮಂಗಳವಾರ, ಡಿಸೆಂಬರ್ 10, 2019
20 °C

ರಘೋಜಿ ಕಿಡ್ನಿ ಆಸ್ಪತ್ರೆ ಉದ್ಘಾಟನೆ 17ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊಲ್ಲಾಪುರ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ರಘೋಜಿ ಕಿಡ್ನಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ನ.17ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಸ್ಪತ್ರೆಯ ಸಂಚಾಲಕ ಡಾ.ವಿಜಯ್ ರಘೋಜಿ, ಮುಂಬೈ ಆಸ್ಪತ್ರೆಯ ಮೂತ್ರರೊಗ ತಜ್ಞ ಡಾ.ಪ್ರಶಾಂತ ಪಟ್ನಾಯಿಕ್, ಮಿರಜ್‌ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸಂಭಾಜಿ ವಾಘ ಮತ್ತು ಮುಂಬೈನ ಪ್ರಸಿದ್ಧ ಲ್ಯಾಪ್ರೋಸ್ಕೋಪಿ ತಜ್ಞ ಡಾ.ನಾಗೇಂದ್ರ ಸರದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸೊಲ್ಲಾಪುರ–ಹುಟಗಿ ರಸ್ತೆಯಲ್ಲಿನ ಮೊಹಿತೆ ನಗರದಲ್ಲಿ ಅರ್ಧ ಎಕರೆ ಜಾಗದಲ್ಲಿ 5 ಅಂತಸ್ತಿನ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಮೂತ್ರರೊಗ ಮತ್ತು ಇತರ ರೋಗಗಳಿಗೆ ಚಿಕಿತ್ಸೆ ಲಭ್ಯವಿದೆ ಎಂದು ತಿಳಿಸಿದರು.

3 ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿ, ಲೇಸರ್‌ ಥೆರಪಿ, ಸಿಟಿ ಸ್ಕ್ಯಾನ್‌, ಡಿಜಿಟಲ್‌ ಎಕ್ಸ್‌ರೇ, 10 ಹಾಸಿಗೆ ಸಾಮರ್ಥ್ಯದ ಐಸಿಯು, 12 ಹಾಸಿಗೆ ಸಾಮರ್ಥ್ಯದ ಡಯಾಲಿಸಿಸ್‌ ಘಟಕ, ಅತ್ಯಾಧುನಿಕ ವಾರ್ಡ್‌ಗಳು, 24 ಗಂಟೆ ವೈದ್ಯಕೀಯ ಸೇವೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಡಾ.ವಿಜಯ್ ರಘೋಜಿ ಅವರು 37 ವರ್ಷಗಳಿಂದ ಸೊಲ್ಲಾಪುರ ನಗರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು, ಮೊದಲ ಮೂತ್ರರೊಗ ತಜ್ಞ ಎಂದು ಖ್ಯಾತಿ ಪಡೆದಿದ್ದಾರೆ. ಇವರು ಸೊಲ್ಲಾಪುರದಲ್ಲಿಯ ಅಶ್ವಿನಿ ಸಹಕಾರಿ ಆಸ್ಪತ್ರೆಯ ಸಂಚಾಲಕರಾಗಿಯೂ ಕಾರ್ಯವಹಿಸುತ್ತಿದ್ದಾರೆ. ಇವರ ಪತ್ನಿ ಡಾ.ಸಂಧ್ಯಾ ರಘೋಜಿ ನೇತ್ರ ತಜ್ಞರಾಗಿದ್ದಾರೆ.

ಡಾ.ನವನಾಥ ಫುಲಾರಿ, ಡಾ.ಗಜಾನನ ಪಿಲಾಗುಲವಾರ, ಡಾ.ನಿಹಾರಿಕಾ ರಘೋಜಿ ಪಿಲಾಗುಲವಾರ, ಡಾ.ಆಶೀತ್ ಮೆಹ್ತಾ, ಡಾ.ಶೈಲೇಶ್ ಪಟ್ನೆ, ಡಾ.ರುಚಾ ಶಹಾ, ಡಾ.ಸಂಗಮೇಶ್ವರ ಪಾಟೀಲ ಇವರು ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ.ಶ್ರೀರಾಮ್ ಪಿಲಾಗುಲವಾರ ಅವರು ವೈದ್ಯಕೀಯ ವ್ಯವಸ್ಥಾಪಕರಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು