ಸೋಮವಾರ, ಜುಲೈ 4, 2022
21 °C

ಕಲಬುರಗಿ: ಅಪಘಾತದಲ್ಲಿ ಬಾಲಕ ಸಾವು, ಟಿಪ್ಪರ್‌ಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಇಲ್ಲಿನ ಹೀರಾಪುರ ಬಳಿಯ ಮೇಲ್ಸೇತುವೆ ಬಳಿ ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಭಾನುವಾರ ಟಿಪ್ಪರ್ ಹಾಯ್ದ ‍ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದು, ಉದ್ರಿಕ್ತ ಗುಂಪು ಟಿಪ್ಪರ್‌ಗೆ ಬೆಂಕಿ ಹಚ್ಚಿದೆ.

ಮನೀಷ್ ಮಲ್ಲಿಕಾರ್ಜುನ (10) ಮೃತ ಬಾಲಕ. ಟಿಪ್ಪರ್ ಹಾಯ್ದ ರಭಸಕ್ಕೆ ಬಾಲಕನ ಹೊಟ್ಟೆಯ ಭಾಗ ಛಿದ್ರವಾಗಿದ್ದು, ಕರಳು ಹೊರಗೆ ಬಂದಿದೆ.

ಪೋಷಕರ ಜೊತೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಬಾಲಕ ಮುಂದೆ ಓಡಿದ್ದ. ಮೇಲ್ಸೇತುವೆ ಮೇಲಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ. ಅಪಘಾತ ತಿಳಿದು ಸ್ಥಳಕ್ಕೆ ಬಂದ ನಿವಾಸಿಗಳು ಟಿಪ್ಪರ್‌ಗೆ ಬೆಂಕಿ ಹಚ್ಚಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಸಂಚಾರ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು