ಬುಧವಾರ, ಜೂನ್ 16, 2021
23 °C
ಶಾಸಕ ಮತ್ತಿಮೂಡಗೆ ಮತ್ತೆ ಕೋವಿಡ್

ಕಲಬುರ್ಗಿ: ಕೋವಿಡ್‌ನಿಂದ 11 ಜನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋವಿಡ್‌ನಿಂದ ಜಿಲ್ಲೆಯಲ್ಲಿ ಮತ್ತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರದ ಆರೋಗ್ಯ ಇಲಾಖೆಯ ಬುಲೆಟಿನ್‌ ತಿಳಿಸಿದೆ.

ಕಲಬುರ್ಗಿ ಗಂಜ್‌ನ ಅಯ್ಯರವಾಡಿಯ 51 ವರ್ಷದ ಪುರುಷ, ವೀರೇಂದ್ರ ಪಾಟೀಲ ನಗರದ 30 ವರ್ಷದ ಯುವಕ, ಶಹಾಬಜಾರ್‌ನ 52 ವರ್ಷದ ಪುರುಷ, ಶಿವಾಜಿ ನಗರದ 80 ವರ್ಷದ ವೃದ್ಧ, ಎಂಎಸ್‌ಕೆ ಮಿಲ್‌ನ 68 ವರ್ಷದ ಪುರುಷ, ಸೇಡಂನ ಹಾಬಳ–ಟಿಯ 65 ವರ್ಷದ ವೃದ್ಧ, ಅಫಜಲಪುರದ ಶಿವಪುರದ 35 ವರ್ಷದ ಯುವಕ, ಆಳಂದ ತಾಲ್ಲೂಕು ಹಳ್ಳಿ ಸಲಗರ ಗ್ರಾಮದ 48 ವರ್ಷದ ಪುರುಷ, ಆಳಂದದ ಬ್ರಾಹ್ಮಣ ಗಲ್ಲಿಯ 41 ವರ್ಷದ ಮಹಿಳೆ, ಜ್ಯೋತಿಬಾ ಫುಲೆ ನಗರದ 45 ವರ್ಷದ ಮಹಿಳೆ, ಪಡಸಾವಳಿಯ 65 ವರ್ಷದ ವೃದ್ಧ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 1261 ಜನರಿಗೆ ಮತ್ತೆ ಸೋಂಕು ಇರುವುದು ದೃಢಪಟ್ಟಿದ್ದು, 652 ಜನ ಗುಣಮುಖರಾಗಿದ್ದಾರೆ.

ಶಾಸಕ ಮತ್ತಿಮೂಡಗೆ ಮತ್ತೆ ಕೋವಿಡ್
ಇತ್ತೀಚೆಗಷ್ಟೇ ಕೋವಿಡ್‌ ದೃಢಪಟ್ಟು ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆದು ವಾಪಸಾಗಿದ್ದ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಮತ್ತೆ ಕೋವಿಡ್‌ ದೃಢಪಟ್ಟಿದೆ. ಅಲ್ಲದೇ, ಅವರ ಪತ್ನಿ ಜಯಶ್ರೀ ಮತ್ತಿಮೂಡ ಹಾಗೂ ಪುತ್ರಿಗೂ ಸೋಂಕು ಇರುವುದು ಗೊತ್ತಾಗಿದೆ. ಸದ್ಯಕ್ಕೆ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು