ಭಾನುವಾರ, ಜನವರಿ 17, 2021
25 °C

ಚಿಂಚೋಳಿ ತಾಲ್ಲೂಕಿನ 12 ಸಣ್ಣ ನೀರಾವರಿ ಕೆರೆಗಳು ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆ ಮುಂದುವದಿದ್ದು ಕೆರೆಕುಂಟೆಗಳು ಹಾಗೂ ಜಲಾಶಯಗಳು ಭರ್ತಿಯಾಗತೊಡಗಿವೆ.

ಅವಿಭಜಿತ ಚಿಂಚೋಳಿ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 20 ಕೆರೆಗಳಲ್ಲಿ ಈಗಾಗಲೇ 12 ಕೆರೆಗಳು ಭರ್ತಿಯಾಗಿವೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ.

ಸಣ್ಣ ನೀರಾವರಿ ಉಪ ವಿಭಾಗ ವ್ಯಾಪ್ತಿಯ ತುಮಕುಂಟಾ, ಹಸರಗುಂಡಗಿ, ಚಿಕ್ಕಲಿಂಗದಳ್ಳಿ, ಕೋಡ್ಲಿ-ಅಲ್ಲಾಪುರ, ಹುಲ್ಸಗೂಡ, ಮುಕರಂಬಾ, ಚಂದನಕೇರಾ, ಖಾನಾಪುರ, ಐನಾಪುರ ಹಳೆಯ ಮತ್ತು ಐನಾಪುರ ಹೊಸ ಮತ್ತು ನಾಗಾಈದಲಾಯಿ, ದೋಟಿಕೊಳ ಕೆರೆಗಳು ಭರ್ತಿಯಾಗಿವೆ ಎಂದರು.

ಹೂಡದಳ್ಳಿ, ಕೊಳ್ಳೂರು, ಚಿಂದಾನೂರ, ಧರ್ಮಾಸಾಗರ ಕೆರೆಗಳು ಭರ್ತಿಯ ಅಂಚಿನಲ್ಲಿದ್ದು, ರಾಜ್ಯದ ಎರಡನೇ ಅತಿದೊಡ್ಡ ಸಣ್ಣ ನೀರಾವರಿಯ ಸಾಲೇಬೀರನಹಳ್ಳಿ ಕೆರೆ ಭರ್ತಿಗೆ ಕೇವಲ 10 ಅಡಿ ಮಾತ್ರ ಬಾಕಿಯಿದೆ. ಒಟ್ಟು 47 ಅಡಿ ಆಳದ ಕೆರೆಗೆ ಈವರೆಗೆ 37 ಅಡಿ ನೀರು ಹರಿದು ಬಂದಿದೆ. ಅಂತಾವರಂ, ಪಂಗರಗಾ ಕೆರೆಗಳಿಗೂ ಒಳ ಹರಿವು ಹೆಚ್ಚಾಗಿದೆ ಎಂದರು.

ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ 4 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭರ್ತಿಯಾಗತೊಡಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು