ಗುರುವಾರ , ಜೂನ್ 17, 2021
21 °C

ಕಲಬುರ್ಗಿ: ಜಿಲ್ಲೆಗೆ ಮತ್ತೆ 480 ರೆಮ್‌ಡಿಸಿವಿರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಗೆ ಗುರುವಾರ ರೆಮ್‌ಡಿಸಿವಿರ್‌ ಚುಚ್ಚುಮದ್ದಿನ 480 ವೈಲ್ಸ್‌ಗಳ ಪೂರೈಕೆಯಾಗಿದ್ದು, ತಕ್ಷಣಕ್ಕೆ ಕೊರತೆ ನೀಗಿದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.

‘ರೆಮ್‌ಡಿಸಿವಿರ್‌ ಚುಚ್ಚುಮದ್ದು ಎಲ್ಲ ಕೋವಿಡ್‌ ರೋಗಿಗಳಿಗೂ ಅವಶ್ಯವಿಲ್ಲ. ವೈದ್ಯರು ಶಿಫಾರಸು ಮಾಡುವ ರೋಗಿಗಳಿಗೆ ಮಾತ್ರ ನೀಡಬೇಕು ಎಂದು ಸರ್ಕಾರ ಸೂಚಿಸಿದೆ. ವೈದ್ಯನಾಗಿ ನಾನೂ ಇದನ್ನು ಪದೇಪದೇ ಹೇಳುತ್ತಲೇ ಇದ್ದೇನೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯದಷ್ಟು ಪೂರೈಕೆ ಇದ್ದು, ಇದನ್ನು ಉಚಿತವಾಗಿ ಕೊಡಲಾಗುತ್ತಿದೆ. ಸಣ್ಣಪುಟ್ಟ ಲಕ್ಷಣ ಇದ್ದವರು ಈ ಇಂಜಕ್ಷಣ್‌ ತೆಗೆದುಕೊಳ್ಳಬೇಡಿ’ ಎಂದಿದ್ದಾರೆ.

‘ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ 360 ಕೋವಿಡ್‌ ಬೆಡ್‌ಗಳಿವೆ. ಅವುಗಳಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಈ ಚುಚ್ಚುಮದ್ದು ಉಚಿತವಾಗಿ ಪೂರೈಸುತ್ತೇವೆ. ಉಳಿದವರಿಗೂ ಆದ್ಯತೆ ಮೇರೆಗೆ ಪೂರೈಸುತ್ತಿದ್ದು, ತಕ್ಷಣಕ್ಕೆ ಇದರ ಕೊರತೆ ನೀಗಿದೆ’ ಎಂದು ಅವರು ಹೇಳಿದ್ದಾರೆ.

ಹೆಚ್ಚುಗಾರಿಕೆ ಇಲ್ಲ: ‘ಬುಧವಾರ ನಾನೇ ಬೆಂಗಳೂರಿಗೆ ಹೋಗಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ತಂದಿದ್ದಕ್ಕಾಗಿ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇವುಗಳ ಕೊರತೆಯ ಮಾಹಿತಿ ತಿಳಿಯುತ್ತಿದ್ದಂತೆ ನಾನೇ ಹೋಗಿ ಅವುಗಳನ್ನು ತಂದಿದ್ದೇನೆ. ಇದರಲ್ಲಿ ಹೆಚ್ಚುಗಾರಿಕೆ ಏನೂ ಇಲ್ಲ. ಜನಪ್ರತಿನಿಧಿ ಅಷ್ಟೇ ಅಲ್ಲ, ನಾನು ವೈದ್ಯನೂ ಹೌದು. ನನ್ನ ಜವಾಬ್ದಾರಿ ನಿಭಾಯಿಸಿದ್ದೇನೆ ಅಷ್ಟೇ’ ಎಂದು ಡಾ.ಉಮೇಶ ಜಾಧವ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು