ಅಫಜಲಪುರ: ಶನಿವಾರ ಸಂಜೆ ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ಸಿದ್ದನೂರು ಗ್ರಾಮದ ಕಲಾವತಿ ಚಿಕ್ಕರೇವೂರು ಅವರ ಕುಟುಂಬಕ್ಕೆ ಶಾಸಕ ಎಂ. ವೈ. ಪಾಟೀಲ್ ಅವರು ಭಾನುವಾರ ಸಾಂತ್ವನ ಹೇಳಿ ಸರ್ಕಾರದಿಂದ ₹ 5 ಲಕ್ಷ ಪರಿಹಾರದ ಚೆಕ್ ನೀಡಿದರು.
ಇದೇ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಕವಿತಾ ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಅವರಿಗೆ ಸಹಾಯ ಮಾಡಿ ಎಂದು ಶಾಸಕರು ತಹಶೀಲ್ದಾರ್ ಸಂಜು ಕುಮಾರ್ ದಾಸರ ಅವರಿಗೆ ಸೂಚಿಸಿದರು. ಕಲಾವತಿ ಅವರ ಕುಟುಂಬದವರಿಗೆ ಆಹಾರ ಇಲಾಖೆಯಿಂದ ಸ್ವಲ್ಪ ದಿನದವರೆಗೆ ಆಹಾರಧಾನ್ಯ ನೀಡುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದರು.
ರೇವೂರು( ಬಿ) ಠಾಣೆಯ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಎಸ್. ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ಧಾರ್ಥ ಬಸರಿಗಿಡದ, ಪ್ರಕಾಶ್ ಜಮಾದಾರ, ವಕೀಲ ಎಸ್. ಎಸ್. ಪಾಟೀಲ್ ಹಾಗೂ ಗ್ರಾಮದ ಮುಖಂಡರಾದ ಸಿದ್ದಣ್ಣ ಸಗರ್, ಮಲ್ಕಣ್ಣ ಶಿರ್, ದತ್ತು ಹೆರೂರ, ಗುಂಡಯ್ಯ ಹಿರೇಮಠ , ಲತೀಫ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.