ಕಲಬುರಗಿ: ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಗಣಿತ, ಶಿಕ್ಷಣಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ವಿಷಯದ ಪರೀಕ್ಷೆಗಳು ಸೋಮವಾರ ಸುಸೂತ್ರವಾಗಿ ನಡೆದವು. ಒಟ್ಟು 19,576 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 18,936 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 640 ವಿದ್ಯಾರ್ಥಿಗಳು ಗೈರಾಗಿದ್ದರು.

ಗಣಿತ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 14,173 ವಿದ್ಯಾರ್ಥಿಗಳ ಪೈಕಿ 13,838 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. 335 ವಿದ್ಯಾರ್ಥಿಗಳು ಗೈರಾಗಿದ್ದರು.

ಶಿಕ್ಷಣಶಾಸ್ತ್ರ ವಿಷಯಕ್ಕೆ ನೋಂದಣಿ ಮಾಡಿಕೊಂಡಿದ್ದ 957 ವಿದ್ಯಾರ್ಥಿಗಳ ಪೈಕಿ 836 ಮಂದಿ ಪರೀಕ್ಷೆ ಬರೆದರು. 94 ವಿದ್ಯಾರ್ಥಿಗಳು ಗೈರಾಗಿದ್ದರು.

ವ್ಯವಹಾರ ಅಧ್ಯಯನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 4,446 ವಿದ್ಯಾರ್ಥಿಗಳ ಪೈಕಿ 4,235 ಮಂದಿ ಹಾಜರಾದರು. 211 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು ಎಂದು ಡಿಡಿಪಿಯು ಅಶೋಕ ಶಾಸ್ತ್ರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಕಲಬುರಗಿ: ದ್ವಿತೀಯ ಪಿಯು ಪರೀಕ್ಷೆ ನಡೆದ ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಎಂ.ಪಿ.ಎಚ್.ಎಸ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕೇಂದ್ರದ ಪ್ರತಿ ಕೋಣೆಗೆ ಭೇಟಿ ನೀಡಿದ ಅವರು ‘ಯಾವುದೇ ರೀತಿಯಲ್ಲೂ ನಕಲಿಗೆ ಅವಕಾಶ ನೀಡಬಾರದು. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು. ಕಡ್ಡಾಯಾಗಿ ಪ್ರಿಸ್ಕಿಂಗ್ ಮಾಡಬೇಕು’ ಎಂದು ಕೊಠಡಿ ಮೇಲ್ವಿಚಾರಕರಿಗೆ ಸೂಚಿಸಿದರು.

ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿರುವ ವೆಬ್ ಕಾಸ್ಟಿಂಗ್ ಮೇಲೆ ನಿಗಾ ಇಡಲು ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ನಿಗಾ ಕೊಠಡಿಗೂ ಭೇಟಿ ನೀಡಿದರು. ಅಲ್ಲಿನ ಸಿಬ್ಬಂದಿಯಿಂದ ನಿಗಾ ಕೇಂದ್ರದ ಕಾರ್ಯವೈಖರಿ ಕುರಿತು ಮಾಹಿತಿ ಪಡೆದರು.

‘51 ಪರೀಕ್ಷಾ ಕೇಂದ್ರಗಳ 765 ಕೊಠಡಿಯಲ್ಲಿ 1284 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿದ್ದು ಮಾನಿಟರ್ ರೂಂನಿಂದಲೇ ಪ್ರತಿ ಕೇಂದ್ರದ ಪರೀಕ್ಷಾ ಕೋಣೆಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ’ ಎಂದು ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.