ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಕಾರ್ಮಿಕರನ್ನು ಒಂದುಗೂಡಿಸಿದ ಡಬ್ಲ್ಯುಎಫ್‌ಟಿಯು:  ವಿ.ಜಿ. ದೇಸಾಯಿ

ಕಾರ್ಮಿಕ ಸಂಘಟನೆಗಳ ಅಂತರ ರಾಷ್ಟ್ರೀಯ ಒಕ್ಕೂಟಕ್ಕೆ 75 ವಸಂತ; ಬಹಿರಂಗ ಸಭೆಯಲ್ಲಿ ಚರ್ಚೆ
Last Updated 4 ಅಕ್ಟೋಬರ್ 2020, 3:16 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬಂಡವಾಳ ಶಾಹಿತ್ವವನ್ನು ಧಿಕ್ಕರಿಸುತ್ತ ಕಾರ್ಮಿಕರ ಬದುಕಿನ ರಕ್ಷಣೆಗಾಗಿ ಹುಟ್ಟಿಕೊಂಡಕಾರ್ಮಿಕ ಸಂಘಟನೆಗಳ ಅಂತರ ರಾಷ್ಟ್ರೀಯ ಒಕ್ಕೂಟ (WFTU)ಕ್ಕೆ ಈಗ 75 ವಸಂತಗಳು ತುಂಬಿವೆ. ಇಷ್ಟು ವರ್ಷಗಳಲ್ಲಿ ವಶ್ವವ್ಯಾಪಿ ಮಾಡಿದ ಹೋರಾಟದ ಮಾರ್ಗ ಅನನ್ಯವಾದುದು’ ಎಂದುಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಜಿಲ್ಲಾ ಸಮಿತಿ ಅಧ್ಯಕ್ಷವಿ.ಜಿ. ದೇಸಾಯಿ ಹೇಳಿದರು.

ಡಬ್ಲ್ಯುಎಫ್‌ಟಿಯುಸಂಸ್ಥಾಪನೆಯ 75ನೇ ವಾರ್ಷಿಕೋತ್ಸದ ಪ್ರಯುಕ್ತ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕ ಸಂಘಟನೆಗಳ ಅಂತರರಾಷ್ಟ್ರೀಯ ಒಕ್ಕೂಟ 1945ರಲ್ಲಿ ಸ್ಥಾಪನೆಯಾಯಿತು. ವಿಶ್ವಸಂಸ್ಥೆಯಂತೆಯೇ ವಿಶ್ವದಾದ್ಯಂತದ ಕಾರ್ಮಿಕ ಸಂಘಗಳನ್ನು ಒಂದೇ ಅಂತರರಾಷ್ಟ್ರೀಯ ಸಂಘಟನೆಯಲ್ಲಿ ಒಟ್ಟುಗೂಡಿಸುವುದು ಇದರ ಉದ್ದೇಶವಾಗಿತ್ತು’ ಎಂದರು.

‘ಮುಖ್ಯವಾಗಿ ಎಡಪಂಥೀಯ ಚಿಂತನೆಗಳ ಆಧಾರದ ಮೇಲೆ, ಸಮಾಜವಾದ ಪರವಾದ ವಿಚಾರಗಳ ಪ್ರೇರಣೆಯಿಂದ ಕಮ್ಯುನಿಸ್ಟ್‌ ಪಕ್ಷಗಳೊಂದಿಗೆ ಸಂಬಂಧ ಹೊಂದಿದ ಅಥವಾ ಸಹಾನುಭೂತಿ ಹೊಂದಿದ ಕಾರ್ಮಿಕ ಸಂಘಟನೆಗಳ ಒಕ್ಕೂಟವಾಗಿದೆ. ಒಂದೆಡೆ ಅಮೆರಿಕಾ ಹಾಗೂ ಇತರ ಮುಂದುವರಿದ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ದೇಶಗಳು ಹಾಗೂ ಸೋವಿಯತ್ ಸಮಾಜವಾದಿ ರಷ್ಯಾ ದೇಶಗಳ ನಡುವೆ ಶೀತಲ ಸಮರದ ಸಂದರ್ಭದಲ್ಲಿ, ಡಬ್ಲ್ಯುಎಫ್‌ಟಿಯು ಅಮೆರಿಕದ ಸಾಮ್ರಾಜ್ಯವಾದ, ಯುದ್ಧಕೋರ ಆಕ್ರಮಣಕಾರಿ ಧೋರಣೆಗಳ ವಿರುದ್ಧ ಧ್ವನಿಯೆತ್ತುತ್ತ ಬಂದಿದೆ’ ಎಂದು ತಿಳಿಸಿದರು.

‘90ರ ದಶಕದಲ್ಲಿ ಸಮಾಜವಾದದ ಪತನದ ನಂತರ ತಾತ್ಕಾಲಿಕವಾಗಿ ದುರ್ಬಲಗೊಂಡಿತಾದರೂ ಮತ್ತೇ 2005ರ ನಂತರ ಪುನಶ್ಚೇತನಗೊಂಡು ಜಾಗತಿಕ ಮಟ್ಟದಲ್ಲಿ ಕಾರ್ಮಿಕ ಚಳವಳಿಗೆ ಹೊಸ ಆಯಾಮ ನೀಡಿತು. ಗ್ರೀಸ್‌ ನ ಅಥೇನ್ಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಡಬ್ಲ್ಯುಎಫ್‌ಟಿಯು ಸಾಮ್ರಾಜ್ಯಶಾಹಿ, ದುರಾಕ್ರಮಣ, ವರ್ಣಭೇದ ನೀತಿ, ಬಡತನ, ಪರಿಸರ ನಾಶ ಮತ್ತು ಕಾರ್ಮಿಕರ ಶೋಷಣೆಯ ವಿರುದ್ಧ ಅಭಿಯಾನಗಳನ್ನು ಆಯೋಜಿಸುತ್ತಿದೆ. ಇದೀಗ 126ಕ್ಕೂ ಹೆಚ್ಚು ದೇಶಗಳಲ್ಲಿ ಸಂಯೋಜನೆ ಬೆಂಬಲ ಹೊಂದಿದೆ’ ಎಂದರು.

ಭಾಷಣಕಾರರಾಗಿ ಆಗಮಿಸಿದ್ದ ಎಐಯುಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಘವೇಂದ್ರ ಮಾತನಾಡಿ, ‘ಇಂದು ಜಾಗತಿಕವಾಗಿ ಅಮೆರಿಕ, ಮತ್ತಿತರ ಸಾಮ್ರಾಜ್ಯಶಾಹಿ ದೇಶಗಳ ದುರಾಕ್ರಮಣ, ದಾಳಿ, ಆರ್ಥಿಕ ದಿಗ್ಬಂಧನ, ಸಣ್ಣಪುಟ್ಟ ಪ್ರಾದೇಶಿಕ ಯುದ್ಧಗಳನ್ನು ಹುಟ್ಟುಹಾಕುತ್ತಿರುವ ಸಂದರ್ಭದಲ್ಲಿ ಡಬ್ಲ್ಯುಎಫ್‌ಟಿಯು ಪಾತ್ರ ಹೆಚ್ಚಿದೆ. ಆದ್ದರಿಂದ ನಮ್ಮ ದೇಶವೂ ಸೇರಿದಂತೆ ಎಲ್ಲಾ ದೇಶಗಳ ದುಡಿಯುವ ಜನತೆ; ವಿಶ್ವದ ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾರ್ಲ್ ಮಾರ್ಕ್ಸ್‌ ಅವರ ವಿಶ್ವದ ಕಾರ್ಮಿಕರೇ ಒಂದಾಗಿ’ ಎಂಬ ಉದ್ಘೋಷದ ಆಧಾರದ ಮೇಲೆ ಒಂದಾಗಬೇಕಿದೆ’ ಎಂದರು.

ಆಶಾ, ಅಂಗನವಾಡಿ, ಬಿಸಿಊಟ ಕಾರ್ಯಕರ್ತೆಯರು, ವಿವಿಧ ಕ್ಷೇತ್ರದ ಕಾರ್ಮಿಕರು ಭಾಗವಹಿಸಿದ್ದರು. ಸಂಯುಕ್ತ ಅಂಗನವಾಡಿ ಸಂಘಟನಾಕಾರರಾದ ನಾಗಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT