ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ಎಫ್‌ಡಿಎ, ಅಟೆಂಡರ್‌ ಎಸಿಬಿ ಬಲೆಗೆ

Last Updated 25 ಫೆಬ್ರುವರಿ 2020, 9:41 IST
ಅಕ್ಷರ ಗಾತ್ರ

ಕ‌ಲಬುರ್ಗಿ: ಇಲ್ಲಿನ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ–1ರಲ್ಲಿ ಪ್ರಥಮ ಸರ್ಜೆ ಸಹಾಯಕ ಹಾಗೂ ಅಟೆಂಡರ್‌ ₹ 25 ಸಾವಿರ ಲಂಚ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಳಿ ಮಾಡಿ ಹಣವನ್ನು ವಶಪಡಿಸಿಕೊಂಡು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಎಫ್‌ಡಿಎ ಅಖಿಲ್‌ ಹಾಗೂ ಅಟೆಂಡರ್‌ ಮುನ್ನಾಭಾಯಿ ಎಸಿಬಿ ಬಲೆಗೆ ಬಿದ್ದವರು. ಚಿಂಚೋಳಿ ಡಿಪೊದಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾಧರ ಎಂಬುವವರು ಕುಟುಂಬದವರ ಆರೋಗ್ಯ ಸಮಸ್ಯೆಯಿಂದ 13 ತಿಂಗಳು ರಜೆ ಹಾಕಿದ್ದರು. ಗೈರು ಹಾಜರಿ ಎಂದು ಪರಿಗಣಿಸದೇ ಬಾಕಿ ವೇತನವನ್ನು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದರೆ ₹ 25 ಸಾವಿರ ನೀಡಬೇಕು ಎಂದು ಅಖಿಲ್ ಹಾಗೂ ಮುನ್ನಾಭಾಯಿ ಬೇಡಿಕೆ ಇಟ್ಟಿದ್ದರು. ವಿದ್ಯಾಧರ ಅವರು ಹಣ ನೀಡುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಸುಧಾ ಆದಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT