ಶುಕ್ರವಾರ, ಜನವರಿ 24, 2020
16 °C

ಮರಕ್ಕೆ ಕಾರು ಡಿಕ್ಕಿ: ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಮಲಾಪುರ: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಡೊಂಗರಗಾಂವ ಕ್ರಾಸ್‌ ಬಳಿ ಸೋಮವಾರ ನಡೆದಿದೆ.

ಕಾರಿನಲ್ಲಿ ತೆರಳುತ್ತಿದ್ದ ವಿಜಯಪುರದ ನೌಬಾಗ ಕಾಲೊನಿ ನಿವಾಸಿ ಬಂದೆನವಾಜ್‌ ರಸೂಲ್‌ (48) ಮೃತಪಟ್ಟವರು. ರುಬಿನಾ, ಯಾಸ್ಮೀನ್‌, ಅಲೀನಾ, ಅಫ್ಸರ ಬೇಗಂ, ಅಕ್ಬರ್‌ ಹುಸೇನ್‌, ಮೊಹಮ್ಮದ್‌ ಅಲಿ ಗಾಯಗೊಂಡಿದ್ದಾರೆ.

ಇವರು ವಿಜಯಪುರದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರು ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮಲಾಪುರ ಪೊಲೀಸ್‌ ಠಾಣೆ ಪಿಎಸ್‌ಐ ಶೀಲಾ ನಯಮನ್‌, ಸಿಬ್ಬಂದಿ ಕಿಶನ್‌ ಜಾಧವ್‌ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)