ಕಮಲಾಪುರ: ‘ಪತ್ರಕರ್ತರು ಪತ್ರಿಕಾ ವೃತ್ತಿಯನ್ನು ಒಂದು ತತ್ವ, ಸಿದ್ಧಾಂತ ಎಂದು ನಂಬಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು’ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.
ಇಲ್ಲಿನ ಆಕೃತಿ ಕಲ್ಯಾಣ ಮಂಟಪದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚಣೆಯಲ್ಲಿ ಅವರು ಮಾತನಾಡಿದರು.
‘ಸೂರ್ಯಕಿರಣದ ವ್ಯಾಪ್ತಿಗೆ ಒಳಪಡುವ ಎಲ್ಲ ಸಂಗತಿ, ವಿಷಯಗಳಲ್ಲೂ ಪತ್ರಕರ್ತ ಆಸಕ್ತಿ ಹೊಂದಿರಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳಿದ್ದು, ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ವರದಿಗಾರರು ಮಾಡಬೇಕು’ ಎಂದು ಸಲಹೆ ನೀಡಿದರು.
ಲಾಡಮುಗಳಿ ಅಭಿನವ ಬಸವಲಿಂಗ ಸ್ವಾಮೀಜಿ, ಗ್ರೇಡ್–2 ತಹಶೀಲ್ದಾರ್ ಗಂಗಾಧರ ಪಾಟೀಲ, ಪತ್ರಕರ್ತ ಅರುಣ ಕದಮ್, ರಾಜಕುಮಾರ ಕೋಟಿ, ಸುಜಾತಾ ಎಸ್.ಪಾಟೀಲ, ಶಶಿಕಲಾ ಬಿ.ಮಾಲಿಪಾಟೀಲ, ಶೃತಿ ಬಿರಾದಾರ, ಶ್ರೀಹರ್ಷಾ, ನೇತ್ರಾವತಿ ರಾಂಪೂರೆ, ಬಸವರಾಜ ಮಠಪತಿ, ಶರಣಬಸಪ್ಪ ವಡ್ಡನಕೇರಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಅವಂಟಿ, ಹಾಗೂ ಪಿಎಚ್.ಡಿ ಪದವಿ ಪಡೆದ ಡಾ.ಸತೀಶ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ವಿತರಕರಿಗೆ ರೇನ್‌ಕೋಟ್ ವಿತರಿಸಲಾಯಿತು.
ಸೊಂತ ಗ್ರಾಮದ ಶಂಕರಲಿಂಗ ಮಹಾರಾಜ, ಮಹಾಗಾಂವದ ವಿರೂಪಾಕ್ಷ ದೇವರು, ಮಾಜಿ ಸಚಿವ ರೇವುನಾಯಕ ಬೆಳಮಗಿ, ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷ ಸುಭಾಷ ಬಿರಾದಾರ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಅಶೋಕ ಕಪನೂರ, ತಹಶೀಲ್ದಾರ್ ರಮೇಶ ಪೆದ್ದೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಮುಖಂಡರಾದ ಗೋರಖನಾಥ ಶಾಕಾಪೂರೆ, ಸಂಗಮೇಶ ವಾಲಿ, ಸತೀಶ ಸೋರಡೆ, ರಾಜಕುಮಾರ ಮಂಠಾಳೆ, ಶಿವಕುಮಾರ ದೋಶೆಟ್ಟಿ, ಮಲ್ಲಿಕಾರ್ಜುನ ಮರತೂರ, ಗುರು ಮಾಟುರ, ಶಿವಶಂಕರ ಸುಬ್ಬದಾರ, ಪರಮೇಶ್ವರ ಓಕಳಿ, ಪ್ರಶಾಂತ ಮಾನಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.