ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋಲಿ, ಕಬ್ಬಲಿಗ ಎಸ್‌ಟಿಗೆ ಸೇರಿಸಿ’

Published 7 ಆಗಸ್ಟ್ 2023, 6:38 IST
Last Updated 7 ಆಗಸ್ಟ್ 2023, 6:38 IST
ಅಕ್ಷರ ಗಾತ್ರ

ಕಲಬುರಗಿ: ಟೊಕರೆ ಕೋಳಿ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರ್ಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕೋಲಿ ಕಬ್ಬಲಿಗ ಮತ್ತು ಅಂಬಿಗ ಸಮಾಜ ಹಾಗೂ ಹಿಂದುಳಿದ ವರ್ಗ ಯುವಶಕ್ತಿ ಅಭಿವೃದ್ಧಿ ಸಂಘಟನೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಎಸ್‌ಟಿ ಪಟ್ಟಿಯಲ್ಲಿ ಸೇರ್ಪಡೆ ಕುರಿತಂತೆ ಸುಮಾರು 1995ರಿಂದ ವಿಠ್ಠಲ ಹೇರೂರ ಅವರ ನೇತೃತ್ವದಲ್ಲಿ ಹೋರಾಟ ಮಾಡುತ್ತಾ ಬರಲಾಗಿದೆ. 40 ವರ್ಷಗಳು ಗತಿಸಿದರೂ ಇನ್ನೂ ಸೇರ್ಪಡೆಯಾಗಿಲ್ಲ. ಕಲಬುರಗಿಯಿಂದ ದೆಹಲಿವರೆಗೂ ಸೈಕಲ್‌ ಜಾಥಾ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಪ್ರಧಾನಿ ಕಚೇರಿಗೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ಸಂಘಟನೆ ಪದಾಧಿಕಾರಿಗಳು ತಿಳಿಸಿದ್ದಾರೆ.

ವರಲಿಂಗ ಮಹಾರಾಜ, ರಾಮತೀರ್ಥ ಬಾಬು ಜಮಾದಾರ, ಗುರು ಮರಗುತ್ತಿ, ಶರಣಪ್ಪ ನಾಟಿಕರ್‌,

ವಿಶ್ವನಾಥ ಜಮಾದಾರ ಮಹೇಶ ಕಿಣ್ಣಿಸಡಕ್‌, ದಿಗಂಬರ ಕಾಡಹುಲಿ, ಸಂತೋಷ ಎಸ್‌.ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT