ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ ಪುರಸಭೆ ಬಜೆಟ್‌; ₹ 35.69 ಲಕ್ಷ ಉಳಿತಾಯ ಬಜೆಟ್

ಸಭೆ ಬಹಿಷ್ಕರಿಸಿದ ಬಿಜೆಪಿ ಸದಸ್ಯರು
Last Updated 25 ಮಾರ್ಚ್ 2022, 3:35 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಪುರಸಭೆಯ 2022-23ನೇ ಸಾಲಿನ ₹ 35.69 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಯಿತು.

ಪುರಸಭೆ ಅಧ್ಯಕ್ಷೆ ರೇಣುಕಾ ಪಾಟೀಲ್, ಉಪಾಧ್ಯಕ್ಷೆ ಕಮಲಾ ಗಾಡಿವಡ್ಡರ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು ಬಜೆಟ್‌ ಮಂಡಿಸಿದರು.

ಸದಸ್ಯ ಬಿಲ್ಲಮರಾಜ ಮ್ಯಾಳೇಶಿ ಮಾತನಾಡಿ, ‘ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದ್ದರಿಂದ ಸ್ವಚ್ಛತಾ ಕಾರ್ಯಗಳು ನಡೆಯುತ್ತಿಲ್ಲ. ಎಲ್ಲ ವಾರ್ಡ್‌ಗಳಿಗೆ ಸದಸ್ಯರೊಳಗೊಂಡು ಎಂಜಿನಿಯರ್ ಲೋಕೇಶ್ ಅವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ‘ ಎಂದರು. ಅದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು.
ಊಟ ಮಾಡದ ಸದಸ್ಯರು: ಊಟದ ಸಮಯವಾಗಿದೆ ಎಂದು ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು ಹೇಳಿದಾಗ ಬಿಜೆಪಿಯ ಸದಸ್ಯರಾದ ಶಿವಾನಂದ ಸಲಗರ, ಭೀಮು ಬಬಲಾದ ಅವರು ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೆ ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ತಮ್ಮ ಸಮಸ್ಯೆಗೆ ಸ್ಪಂದಿಸದ ಕಿರಿಯ ಎಂಜಿಯರ್ ವಿರುದ್ಧ ಹರಿಹಾಯ್ದರು.

ಉದ್ದೇಶ ಪೂರ್ವಕವಾಗಿ ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಸಾಮಾನ್ಯ ಸಭೆ ನಡೆದಿಲ್ಲ ಎಂದು ಸದಸ್ಯರು ಊಟ ಮಾಡದೇ ಸಭೆ ಬಹಿಷ್ಕರಿಸಿ ಹೊರ ನಡೆದರು.

’ಗದ್ದಲ ಬೇಡ, ಸಮಾಧಾನವಾಗಿ ಪ್ರಶ್ನೆ ಕೇಳಿ, ಉತ್ತರ ಕೊಡುತ್ತೇವೆ. ಊಟ ಮಾಡಿ ನಂತರ ಮತ್ತೆ ಚರ್ಚೆ ಮುಂದುವರೆಸೋಣ‘ ಎಂದು ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ್ ಪಾಟೀಲ್ ಮನವಿ ಮಾಡಿದರು.

ಸದಸ್ಯ ಸುನಂದ ಜಮಾದಾರ, ಸಾರಾಬಿ ಪೀರವಾಲೆ ತಮ್ಮ ವಾರ್ಡ್‌ಗಳ ಬಗ್ಗೆ ಸಮಸ್ಯೆ ಹೇಳಿಕೊಂಡರು.

ನಾಮನಿರ್ದೇಶಿತ ಸದಸ್ಯ ಶರಣಪ್ಪ ಗುಡ್ಡಡಗಿ, ಸದಸ್ಯರಾದ ಸಲಾವುದ್ದೀನ ಪಾಶಾ ಮಣ್ಣೂರ, ಗಂಗಾಧರ ಶ್ರೀಗಿರಿ ಮಾತನಾಡಿದರು.

ಪುರಸಭೆ ಉಪಾಧ್ಯಕ್ಷೆ ಕಮಲಾ ಗಾಡಿವಡ್ಡರ್, ಸದಸ್ಯರಾದ ರವಿ ನಂದಶೆಟ್ಟಿ, ಹಾಜು ಮುಜಾವರ, ಪ್ರಿಯಾಂಕಾ ಮಲಘಾಣ, ಯಮನಪ್ಪ ಭಾಸಗಿ, ಬಾಬು ಹಳ್ಯಾಳ, ಕಾವೇರಿ ರಾಠೋಡ, ಭಾಗಮ್ಮ ಹಿರೆಕುರಬರ, ಪ್ರತಿಭಾ ಮಹಿಂದ್ರಕರ್ ಉಪಸ್ಥಿತರಿದ್ದರು. ಪುರಸಭೆ ಅಧಿಕಾರಿ ಮಲ್ಲಿನಾಥ ಕಾಮದೆ ಬಜೆಟ್ ಮುಖ್ಯಾಂಶಗಳನ್ನು ಓದಿ ಒಪ್ಪಿಗೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT