ಲೈಂಗಿಕ ಕಿರುಕುಳ ನೀಡಿರುವ ಉಪನ್ಯಾಸಕ ರಾಜಕುಮಾರ ಕುಂಬಾರನನ್ನು ಬಂಧಿಸುವವರೆಗೆ ಕಾಲೇಜು ಆರಂಭಿಸಬಾರದು ಎಂದು ಪೋಷಕರು ಹಾಗೂ ಸಾರ್ವಜನಿಕರು ಅಫಜಲಪುರ ಕಾಲೇಜಿನ ಎದುರು ಶನಿವಾರ ಪ್ರತಿಭಟನೆ ಮಾಡಿದರು
16 ವಿದ್ಯಾರ್ಥಿಯರಿಗೆ ಲೈಂಗಿಕ ಕಿರುಕುಳ!
ರಾಜಕುಮಾರ ಕುಮಾರ ಅವರು ಅದೇ ಕಾಲೇಜಿನ ಸುಮಾರು 16 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ವಿದ್ಯಾರ್ಥಿನಿಯರು ಈ ಕುರಿತು ಕ್ರಮ ಕೈಗೊಳ್ಳುವಂತೆ ಕಾಲೇಜಿನ ಪ್ರಾಚಾರ್ಯರರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಪ್ರಾಚಾರ್ಯರನ್ನು ವಿಚಾರಿಸಿದಾಗ ‘ಅದನ್ನು ಗೋಪ್ಯವಾಗಿ ಇಟ್ಟಿದ್ದು ಈ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ’ ಎಂದು ತಿಳಿಸಿದರು. ಸುಮಾರು ದಿನಗಳಿಂದ ಕಾಲೇಜಿನಲ್ಲಿ ಈ ರೀತಿ ಘಟನೆಗಳು ನಡೆಯುತ್ತಿದ್ದರೂ ಯಾಕೆ ಇಲ್ಲಿವರೆಗೆ ಪ್ರಾಚಾರ್ಯರು ವಿಷಯ ಹೊರಗಡೆ ಹಾಕಿಲ್ಲ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂಬುದು ಪೋಷಕರು ಪ್ರಶ್ನೆಯಾಗಿದೆ.