ಆಳಂದ: ‘ರೈತ ಮತ್ತು ಬಡಕೂಲಿಕಾರ್ಮಿಕ ವಿರೋಧಿಯಾದ ವಿಬಿ-ಜಿ ರಾಮ ಜಿ ಮಸೂದೆ ಜಾರಿಗೊಳ್ಳುಸುತ್ತಿರುವ ಕೇಂದ್ರ ಸರ್ಕಾರವು ತಕ್ಷಣ ಈ ಕಾಯಿದೆ ರದ್ದು ಪಡೆಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ಹೋರಾಟಗಾರ್ತಿ ಕೆ.ನೀಲಾ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಆಳಂದ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಮಹಾತ್ಮಗಾಂಧೀಜಿ ಅವರ ಹೆಸರು ಅಳಿಸಿ ಹಾಕಲು ಪಣತೊಟ್ಟಿರುವ ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿಯೂ ರಾಮನ ಜಪ ಮಾಡುತ್ತಿದೆ, ನರೇಗಾ ಯೋಜನೆಯನ್ನೆ ಮುಂದುವರಿಸಬೇಕು, ಪ್ರತಿಯೊಬ್ಬರಿಗೂ 200 ದಿನ ಉದ್ಯೋಗ ನೀಡುವ ಜತೆಗೆ ₹700 ಉದ್ಯೋಗದ ಕೂಲಿ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಆಳಂದ ತಾಲ್ಲೂಕಿನ ಕೆಲ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೂ ಉದ್ಯೋಗ ನೀಡುತ್ತಿಲ್ಲ, ತಕ್ಷಣ ಉದ್ಯೋಗ ಖಾತರಿ ಕಾಮಗಾರಿ ಕೈಗೊಳ್ಳಬೇಕು, ಕೂಲಿಕಾರ್ಮಿಕರ ಜತೆ ಬೇಜವಾಬ್ದಾರಿಯಿಂದ ವರ್ತಿಸಿದ ಮೋಘಾ(ಕೆ) ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಡಿವೈಎಫ್ ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ , ಹೋರಾಟಗಾರರಾದ ಸಲ್ಮಾನ್ ಖಾನ್ , ಮಲ್ಲಮ್ಮ ಜಿಡಗಾ ಮಾತನಾಡಿದರು.

ಜಿಲ್ಲಾ ಸಂಚಾಲಕ ಪ್ರಮೋಧ ಪಂಚಾಳ, ಮಲ್ಲಿಕಾರ್ಜುನ ಶೃಂಗೇರಿ, ರೂಪದೇವಿ ನಡಗೇರಿ, ಸುಮಂಗಲಾ ಜಿಡಗಾ, ಶರಣಮ್ಮ ಇಕ್ಕಳಕಿ, ಮಲ್ಲಿಕಾರ್ಜುನ ದೇಗಾಂವ, ಅಪ್ಪಾರಾವ ಶೃಂಗೇರಿ ಪಾಲ್ಗೋಂಡಿದರು.

ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮನವಿ ಸ್ವೀಕರಿಸಿ ಇಕ್ಕಳಕಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.