ವಾಗ್ದರಿ–ರಿಬ್ಬನ್ ಪಲ್ಲಿ ಚತುಷ್ಪಥ ರಸ್ತೆ ನಿರ್ಮಾಣ, ಅಮರ್ಜಾ ಒಡಲು ತುಂಬಲಿರುವ ಭೀಮೆಯ ನೀರು
ಸಂಜಯ ಪಾಟೀಲ
Published : 2 ಮಾರ್ಚ್ 2026, 6:12 IST
Last Updated : 2 ಮಾರ್ಚ್ 2026, 6:12 IST
ADVERTISEMENT
ಫಾಲೋ ಮಾಡಿ
Comments
ಆಳಂದದ ಅಮರ್ಜಾ ಅಣೆಕಟ್ಟೆ
ಆಳಂದ ತಾಲ್ಲೂಕಿನಲ್ಲಿ ಕೈಗೊಂಡ ಶಿರಪುರ ಮಾದರಿ ಜಲ ಸಂಗ್ರಹ ಕಾಮಗಾರಿ
ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಣ ಆರೋಗ್ಯ ಕೃಷಿ ಪರಿಸರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಜೆಟ್‌ನಲ್ಲಿ ಒದಗಲಿದೆ. ಹಣಕಾಸಿನ ಲಭ್ಯತೆ ಆಧಾರದಲ್ಲಿ ಈ ಬಾರಿ ಬಜೆಟ್ ನಲ್ಲಿ ಆಳಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ನಿರೀಕ್ಷೆ ಇದೆ. ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೇಡಿಕೆಯು ಇಡಲಾಗಿದೆ.
ಬಿ.ಆರ್.ಪಾಟೀಲ ಶಾಸಕ
ಶಿರಪುರ ಮಾದರಿ ಜಲಸಂಗ್ರಹ ಕಾರ್ಯವೂ ರೈತರಿಗೆ ಉಪಯುಕ್ತವಾಗಿದ್ದು ಈ ಬಾರಿ ಬಜೆಟ್‌ನಲ್ಲಿ ಶಾಸಕರ ಬೇಡಿಕೆಯಂತೆ 500 ಕಿ.ಮೀ. ಉದ್ದದ ಶಿರಪುರ ಮಾದರಿ ಕಾಮಗಾರಿಯಾದರೆ ಆಳಂದ ತಾಲ್ಲೂಕಿನಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿದು ಸಮೃದ್ಧ ಮತ್ತು ಸಂಪೂರ್ಣ ನೀರಾವರಿ ಆಧಾರಿತ ತಾಲ್ಲೂಕಾಗಿ ರೂಪಗೊಳ್ಳಲಿದೆ. ಶೇ 70ರಷ್ಟು ರೈತರಿಗೆ ಅನುಕೂಲವಾಗಲಿದೆ.
ಆನಂದ ದೇಶಮುಖ ನಿರಗುಡಿ ಪಿಕೆಪಿಎಸ್ ಅಧ್ಯಕ್ಷ
ಆಳಂದದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಗಡಿಭಾಗದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಉತ್ತಮ ಶೈಕ್ಷಣಿಕ ವ್ಯವಸ್ಥೆ ಸಂಘಟಿಸಲು ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಅದಕ್ಕೆ ಈ ಬಾರಿ ಬಜೆಟ್‌ನಲ್ಲಿ ಸ್ವಂತ ಕಟ್ಟಡಕ್ಕೆ ಅಗತ್ಯವಾದ ಅನುದಾನವು ಸರ್ಕಾರ ಬಜೆಟ್‌ನಲ್ಲಿ ಒದುಗಿಸಬೇಕು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಹ ಆಳಂದ ತಾಲ್ಲೂಕಿನಲ್ಲಿ ತೆರೆಯಬೇಕು.
ಮೋಘಾ ಚಿಚಕೋಟೆ ವಿದ್ಯಾರ್ಥಿನಿ ಆಳಂದ
ಆಳಂದ ತಾಲ್ಲೂಕಿನಿಂದ ಹಾದುಹೋಗುವ ಔರಾದ್–ಸದಾಶಿವಗಡ ರಾಜ್ಯ ಹೆದ್ದಾರಿಯು ಚತುಷ್ಪಥ ರಸ್ತೆಯಾಗಿ ಪರಿವರ್ತಿಸಬೇಕು. ಬೀದರ್‌ನ ಔರಾದ ಭಾಲ್ಕಿ ಬಸವ ಕಲ್ಯಾಣ ಆಳಂದ ಅಫಜಲಪುರ ಸಿಂದಗಿ ಇಂಡಿ ಮಾರ್ಗವಾಗಿ ಸದಾಶಿವಗಡ ಸಂಪರ್ಕಿಸುವ ಈ ರಾಜ್ಯ ಹೆದ್ದಾರಿ ಅಭಿವೃದ್ಧಿಯಿಂದ ಗಡಿಯಲ್ಲಿ ಗ್ರಾಮಗಳ ವ್ಯಾಪಾರ-ವಹಿವಾಟು ಹೆಚ್ಚಲಿದೆ.