ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಅನ್ನದಾತರ ದಾರಿದ್ರ್ಯ ದೂರ ಮಾಡಿದ ಆರಿದ್ರಾ

ಸಕಾಲದಲ್ಲಿ ರೈತರ ಮೇಲೆ ಕೃಪೆ ತೋರಿದ ವರುಣ
Last Updated 23 ಜೂನ್ 2018, 16:00 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಶನಿವಾರ ಸಂಜೆ ಮತ್ತೆ ಉತ್ತಮ ಮಳೆಯಾಗಿದೆ. ಮಳೆಯ ಅಭಾವದಿಂದ ಕಂಗಾಲಾಗಿದ್ದ ರೈತರ ಮೇಲೆ ವರುಣದೇವ ಕೃಪೆ ತೋರಿದ್ದರಿಂದ ಬಾಡುತ್ತಿದ್ದ ಬೆಳೆಗಳು ಜೀವಕಳೆ ಪಡೆದಿವೆ.

ಬೇಸಿಗೆಯಲ್ಲಿ ಮಳೆ ಸುರಿದಿದ್ದರಿಂದ ಮಳೆಗಾಲದಲ್ಲಿ ಮಳೆ ಸುರಿಯುವ ಬಗ್ಗೆ ರೈತರು ಆತಂಕಗೊಂಡಿದ್ದರು. ಈ ಆತಂಕವನ್ನು ಮಿರ್ಗಾ ಮುನಿಸಿಕೊಂಡಿದ್ದರಿಂದ ಮತ್ತಷ್ಟು ಹೆಚ್ಚಾಗಿತ್ತು. ಮೃಗಶಿರಮಳೆ ಕೈಕೊಟ್ಟರು ನಂತರ ಬಂದ ಆರಿದ್ರಾ ಮಳೆ ಶುಭಾರಂಭದ ಮೂಲಕ ರೈತರ ಕೈ ಹಿಡಿದಿದೆ. ಈ ಮೂಲಕ ಕೃಷಿ ಚಟುವಟಿಕೆಗಳು ಚುರುಕು ಪಡೆಯುವಂತಾಗಿದೆ.

ಶನಿವಾರ ಸಂಜೆ ಚಿಂಚೋಳಿ, ಸುಲೇಪೇಟ, ಬೆಡಕಪಳ್ಳಿ, ಐನೋಳ್ಳಿ, ದೇಗಲಮಡಿ, ಚಂದನಕೇರಾ, ರಟಕಲ್‌, ಮುಕರಂಬಾ, ಕಲ್ಲೂರು ರೋಡ್‌ ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಶನಿವಾರ ಬೆಳಿಗ್ಗೆ 8 ಗಂಟೆವರೆಗೆ ಕಳೆದ 24 ಗಂಟೆಗಳಲ್ಲಿ ಚಿಂಚೋಳಿ –46 ಮಿ.ಮೀ, ಶಾದಿಪುರ 46.5 ಮಿ.ಮೀ, ದೆಏಗಲಮಡಿ 46 ಮಿ.ಮೀ, ಜಟ್ಟೂರು 44 ಮಿ.ಮೀ, ಕರ್ಚಖೇಡ್‌ 38 ಮಿ.ಮೀ, ಐನಾಪುರ 36 ಮಿ.ಮೀ, ಕೊಳ್ಳೂರು 33 ಮಿ.ಮೀ, ಐನೋಳ್ಳಿ 30 ಮಿ.ಮೀ, ನಿಡಗುಂದಾ, ಶಿರೋಳ್ಳಿ, ಕುಪನೂರು 26 ಮಿ.ಮೀ, ಕೋಡ್ಲಿ, ಸಾಲೇಬೀರನಹಳ್ಳಿ, ಗಡಿಕೇಶ್ವಾರ್‌ 22 ಮಿ.ಮೀ, ಚಿಮ್ಮನಚೋಡ ಹಸರಗುಂಡಗಿ, ಕುಂಚಾವರಂ 19.5 ಮಿ.ಮೀ, ರಟಕಲ್‌, ಸಲಗರ ಬಸಂತಪುರ 17 ಮಿ.ಮೀ, ಇತರ ಕಡೆಗಳಲ್ಲಿ 10 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್‌ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT