ಬುಧವಾರ, ಜೂನ್ 16, 2021
23 °C
ಒಂದೇ ವಾರದಲ್ಲಿ ಮೂವರು ಪೊಲೀಸರ ಸಾವು

ಚೌಕ್‌ ಠಾಣೆ ಎಎಸ್‌ಐ ಕೋವಿಡ್ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಿವೃತ್ತಿ ಅಂಚಿನಲ್ಲಿದ್ದ ನಗರದ ಚೌಕ್‌ ಪೊಲೀಸ್ ಠಾಣೆಯ ಎಎಸ್‍ಐ ಮಲ್ಲಿಕಾರ್ಜುನ ಪಂಚಕಟ್ಟಿ (59) ಅವರು ಕೊರೊನಾ ಸೋಂಕಿನಿಂದ ಶನಿವಾರ ನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ಮೃತಪಟ್ಟರು.

ಐದು ದಿನಗಳ ಹಿಂದೆ ಅವರಿಗೆ ಸೋಂಕು ತಗುಲಿತ್ತು. ಅವರು ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.‌

ಮಲ್ಲಿಕಾರ್ಜುನ ಅವರು ಇದೇ ಜೂನ್ ತಿಂಗಳಲ್ಲಿ ನಿವೃತ್ತಿ ಹೊಂದುವವರಿದ್ದರು. ಮಾರ್ಚ್‌ ಆರಂಭದಿಂದಲೂ ಅವರು ಕೊರೊನಾ ಫ್ರಂಟ್‌ಲೈನ್‌ ವಾರಿಯರ್‌ ಆಗಿ ಕೆಲಸದಲ್ಲಿ ತೊಡಗಿದ್ದರು. ಕಳೆದ ವರ್ಷ ಕೊರೊನಾ ಸಂಕೀರ್ಣ ಸ್ಥಿತಿ ತಲುಪಿದ ವೇಳೆ ಅವರು ಅತ್ಯುತ್ತಮವಾಗಿ ಸೇವೆ ಸಲ್ಲಿಸಿ, ಪ್ರಶಂಸೆಗೆ ಪಾತ್ರವಾಗಿದ್ದರು ಎಂದು ಠಾಣೆಯ ಹಿರಿಯ ಅಧಿಕಾರಿಗಳು ಸ್ಮರಿಸಿದರು.

ಇದರೊಂದಿಗೆ ಒಂದೇ ವಾರದಲ್ಲಿ ಪೊಲೀಸ್‌ ಇಲಾಖೆಯ ಮೂವರು ಸಾವನ್ನಪ್ಪಿದಂತಾಗಿದೆ.

ವಾರದ ಹಿಂದಷ್ಟೇ ರೋಜಾ ಎಎಸ್‍ಐ ಹಾಗೂ ಶುಕ್ರವಾರ ಅಶೋಕ ನಗರ ಠಾಣೆಯ ಕಾನ್‌ಸ್ಟೆಬಲ್‌ ಕೂಡ ಕೊರೊನಾ ಕಾರನದಿಂದ ಸಾವನ್ನಪ್ಪಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.