ಕಲಬುರಗಿ: ಬಿಸಿಲಿನ ನಡುವೆಯೂ ಚುರುಕಿನಿಂದ ಓಡಿದ ಹಾವೇರಿಯ ಸಮರ್ಥ ಹಾಗೂ ವೈದೇಹಿ ಅಂತರ ಜಿಲ್ಲಾ ಕ್ರೀಡಾ ಶಾಲೆ/ ವಸತಿ ನಿಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 14 ವರ್ಷದೊಳಗಿನವರ 100 ಮೀಟರ್ ಓಟದಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು.

ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಕ್ರೀಡಾಕೂಟದಲ್ಲಿ ಇದೇ ವಿಭಾಗದ ಬಾಲಕರ ಸ್ಪರ್ಧೆಯಲ್ಲಿ ಹಾವೇರಿಯ ಸೃಜಲ್ 2ನೇ ಸ್ಥಾನ ಗಳಿಸಿದರೆ, ಕೊಪ್ಪಳದ ಅಭಿಷೇಕ 3ನೇ ಸ್ಥಾನ ಪಡೆದರು.

ಬಾಲಕಿಯರ ಓಟದಲ್ಲಿ ಕಲಬುರಗಿಯ ಶಿವಾನಿ 2ನೇ ಹಾಗೂ ಯಾದಗಿರಿಯ ಸಿಂಚನಾ 3ನೇ ಸ್ಥಾನ ಗಳಿಸಿದರು.

17 ವರ್ಷದೊಳಗಿನ ಬಾಲಕರ ವಿಭಾಗದ 100 ಮೀ. ಓಟದಲ್ಲಿ ಹಾವೇರಿಯ ಪೃಥ್ವಿಕುಮಾರ ಪ್ರಥಮ, ಕಲಬುರಗಿಯ ಕಿರಣಕುಮಾರ ದ್ವಿತೀಯ ಹಾಗೂ ಹಾವೇರಿಯ ವಿ.ಪೃಥ್ವಿ ತೃತೀಯ ಸ್ಥಾನ ಗಳಿಸಿದರು.

ವಿವಿಧ ಕ್ರೀಡೆಗಳ ಫಲಿತಾಂಶ ಇಂತಿದೆ: 12 ವರ್ಷದೊಳಗಿನ ಬಾಲಕರ 600 ಮೀ. ಓಟ: ಚಿತ್ರದುರ್ಗದ ತಿರುಮಲ–1, ಯಾದಗಿರಿಯ ಶಾಬರೇಶ–2, ಹಾವೇರಿಯ ಹರೀಶ–3; 14 ವರ್ಷದೊಳಗಿನ ಬಾಲಕರ 600 ಮೀ. ಓಟ: ಹಾವೇರಿಯ ಅಬ್ದುಲ್ ಮುಜಾವರ–1, ಹಾವೇರಿಯ ನವೀನ್ ಎಳೆಗೆರ–2, ಹಾವೇರಿಯ ಪವನ್–3; 17 ವರ್ಷದೊಳಗಿನ ಬಾಲಕರ 800 ಮೀ. ಓಟ: ಹಾವೇರಿಯ ವಿಶ್ವಜಿತ್–1, ಕೊಪ್ಪಳದ ಶಂಕರ–2, ಹಾವೇರಿಯ ಮಹಾಲಿಂಗ–3.

ಶಾಟ್ಪಟ್: ಯಾದಗಿರಿಯ ಶಾಬರೇಶ–1, ಹಾವೇರಿಯ ದಿನೇಶ–2, ಕಲಬುರಗಿಯ ದಿಗಂಬರ–3; 14 ವರ್ಷದೊಳಗಿನ ಬಾಲಕರ ಶಾಟ್ಪಟ್: ಹಾವೇರಿಯ ಸಮರ್ಥ–1, ಯಾದಗಿರಿಯ ವಿಶಾಲ–2, ಹಾವೇರಿಯ ಜೀವನ್–3; 12 ವರ್ಷದೊಳಗಿನ ಬಾಲಕರ ಲಾಂಗ್ಜಂಪ್: ಕೊಪ್ಪಳದ ಮೋಹನ–1, ಕಲಬುರಗಿಯ ಆದಿತ್ಯ–2, ಚಿತ್ರದುರ್ಗದ ಸಂತೋಷ–3;

14 ವರ್ಷದೊಳಗಿನ ಬಾಲಕರ ಲಾಂಗ್ಜಂಪ್: ಯಾದಗಿರಿಯ ಸಮರ್ಥ–1, ಹಾವೇರಿಯ ಸೃಜನ–2, ಹಾವೇರಿಯ ರಾಮಚಂದ್ರ –3; 17 ವರ್ಷದೊಳಗಿನ ಬಾಲಕರ ಲಾಂಗ್ಜಂಪ್: ಹಾವೇರಿಯ ಜೀವನ–1, ಹಾವೇರಿಯ ಪ್ರಥ್ವಿ, ಕೊಪ್ಪಳದ ಆನಂದ–3.

ಲಾಂಗ್ಜಂಪ್: ಕೊಪ್ಪಳದ ಸೃಜನಾ–1, ಕೊಪ್ಪಳದ ದೀಕ್ಷಾ–2, ಯಾದಗಿರಿಯ ಸ್ವಾತಿ–3; 14 ವರ್ಷದೊಳಗಿನ ಬಾಲಕಿಯರ ಲಾಂಗ್ಜಂಪ್: ಹಾವೇರಿಯ ವೈದೇಹಿ–1, ಯಾದಗಿರಿಯ ಮಮತಾ–2, ಕೊಪ್ಪಳದ ಸುಷ್ಮಿತಾ–3;

14 ವರ್ಷದೊಳಗಿನ ಬಾಲಕಿಯರ ಶಾಟ್ಪಟ್: ಚಿತ್ರದುರ್ಗದ ಪೂಜಾ–1, ಕಲಬುರಗಿಯ ಮೀರಾಬಾಯಿ–2, ಯಾದಗಿರಿಯ ಸ್ವಪ್ನಾ–3; 12 ವರ್ಷದೊಳಗಿನ ಬಾಲಕಿಯರ 600 ಮೀ ಓಟ: ಹಾವೇರಿಯ ಸಾಕ್ಷಿ–1, ಕೊಪ್ಪಳದ ದೀಕ್ಷಾ–2, ಕಲಬುರಗಿಯ ಸೋನು–3; 14 ವರ್ಷದೊಳಗಿನ ಬಾಲಕಿಯರ 600 ಮೀ ಓಟ: ಕೊಪ್ಪಳದ ಸುಷ್ಮಿತಾ–1, ಕಲಬುರಗಿಯ ಶ್ರೀನಿಧ–2, ಯಾದಗಿರಿಯ ಮಮತಾ–3.

‘ಕ್ರೀಡಾ ಸ್ಫೂರ್ತಿ ಮೆರೆಯಿರಿ’

ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ‘ಕಲಬುರಗಿ ಬಿಸಿಲು ನಾಡು. ವಿವಿಧ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಳ್ಳಬೇಕು. ಅಡ್ಡಿಗಳನ್ನು ಮೀರಿ ಸಾಧನೆ ಮಾಡುವ ಕ್ರೀಡಾಮನೋಭಾವ ಮೆರೆಯಬೇಕು’ ಎಂದು ಸಲಹೆ ನೀಡಿದರು. ‘ಕಲಬುರಗಿ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆ ಹಾಗೂ ಕ್ರೀಡಾ ಮೂಲಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಬ್ಯಾಸ್ಕೆಟ್ಬಾಲ್ ಅಂಗಣ ಹ್ಯಾಂಡ್ಬಾಲ್ ಅಂಗಣ ಸಿದ್ಧಗೊಳ್ಳುತ್ತಿದ್ದು ಹಾಕಿ ಅಂಗಣ ನವೀಕರಣ ನಡೆಯಲಿದೆ’ ಎಂದರು. ಎರಡು ದಿನಗಳ ಕ್ರೀಡಾಕೂಟದಲ್ಲಿ ಕಲಬುರಗಿ ಯಾದಗಿರಿ ಕೊಪ್ಪಳ ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಕ್ರೀಡಾ ವಸತಿ ಶಾಲೆಗಳ 135 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಕ್ರೀಡಾ ಇಲಾಖೆ ಪ್ರಭಾರ ಅಧಿಕಾರಿ ಸಂಗಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿದಾರರಾದ ರಾಜು ಬಾಬು ಚವ್ಹಾಣ ರೋಹಿಣಿ ಪರವಿತಕಾರ ಪ್ರದೀಪ್ ಮಂಜು ತಿಪ್ಪಣ್ಣ ಮಾಳಿ ಪ್ರವೀಣ ಪುಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.