ಕಲಬುರಗಿ: ಮಧ್ಯಮಾವಧಿ ಸಾಲದ ಬಡ್ಡಿಯಲ್ಲಿ ಶೇ 40ರಷ್ಟು ಮನ್ನಾದ ಸೌಲಭ್ಯದ ಅವಕಾಶ ಕಲ್ಪಿಸಲಾಗಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕೋರಿದ್ದಾರೆ.
ಮಧ್ಯಾಮವಧಿ ಸಾಲದ ಕಂತು ಕಟ್ಟದ ರೈತರಿಗೆ ಈಗಾಗಲೇ ನೋಟಿಸ್ ನೀಡಿದ್ದರಿಂದ ಜತೆಗೆ ನ್ಯಾಯಾಲಯವು ರೈತರ ಆಸ್ತಿ ಹರಾಜಿಗೆ ಮುಂದಾಗುತ್ತಿರುವ ಪ್ರಯುಕ್ತ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಬಡ್ಡಿಯಲ್ಲಿ ಶೇ 40ರಷ್ಟು ರಿಯಾಯಿತಿ ನೀಡಲು ಪ್ರಮುಖ ನಿರ್ಧಾರ ಕೈಗೊಂಡಿದೆ. ಆದ್ದರಿಂದ ರೈತರು ಅವಕಾಶದ ಸದುಪಯೋಗ ಪಡೆದುಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕೆಂದು ಕೋರಿದ್ದಾರೆ.
ಬಡ್ಡಿಯಲ್ಲಿ ಶೇ 40ರಷ್ಟು ಸಾಲ ಕಟ್ಟುವುದು ಕೊನೆ ಅವಕಾಶ ನೀಡಲಾಗಿದ್ದು, ರೈತರು ಈ ಕೂಡಲೇ ಸಾಲ ಮರುಪಾವತಿಸುವ ಮುಖಾಂತರ ಹರಾಜುದಿಂದ ಪಾರಾಗಬೇಕೆಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.