ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ರಿಂದ ಬಲಭೀಮಸೇನ್ ದೇವರ ಛಟ್ಟಿ ಉತ್ಸವ

Last Updated 6 ಡಿಸೆಂಬರ್ 2021, 11:02 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ರಾಸಣಗಿ ಗ್ರಾಮದ ಬಲಭೀಮಸೇನ್ ದೇವರ ಛಟ್ಟಿ ಉತ್ಸವ ಮಂಗಳವಾರ (ಡಿ.7)ರಿಂದ 9ರ ವರೆಗೆ ಜರುಗಲಿದೆ.

ಛಟ್ಟಿ ಉತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಭೀಮಾ ನದಿ ತೀರದಲ್ಲಿ ಗಂಗಾಸ್ನಾನ ನಡೆಯಲಿದೆ. ಕಟ್ಟಿಹೊಳೆ ಜಟ್ಟಿಂಗರಾಯನಿಗೆ ವಿಶೇಷ ಪೂಜೆ, ಅಭಿಷೇಕ ಸಹ ಜರುಗುವುದು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು.

ಸಂಜೆ 4ಕ್ಕೆ ಕಟ್ಟಿಹೊಳೆ ಜಟ್ಟಿಂಗರಾಯ ದೇವಸ್ಥಾನದಿಂದಬಲಭೀಮಸೇನ್ ದೇವರ ಪಲ್ಲಕ್ಕಿ ಉತ್ಸವ ಹೊರಟು ದೇವಸ್ಥಾನ ತಲುಪಲಿದೆ. ಶಂಕರಗೌಡ ಪಾಟೀಲ, ಶಿವಶಂಕರಯ್ಯ ಮಠ, ಬಿ.ಜಿ.ಪಾಟೀಲ, ಎಸ್.ಡಿ.ಪಾಟೀಲ ಅವರಿಂದ ಅನ್ನ ಸಂತರ್ಪಣೆ ನಡೆಯಲಿದೆ.

ಡಿ.8ರಂದು ಬೆಳಿಗ್ಗೆ 8ಕ್ಕೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವವವು. ಬೆಳಿಗ್ಗೆ 11ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ 9 ಗಂಟೆಯ ಪಲ್ಲಕ್ಕಿ ಸೇವೆಯಲ್ಲಿ ಗುರುರಾಜ ಹೇರೂರ ನೆಲೋಗಿ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಡುವರು.

ಅನೀಲಕುಮಾರ ವಿಠಲಾಚಾರ್ಯ ಇನಾಮದಾರ್ ಹರವಾಳ ಹಾಗೂ ಅಂಜನಿಕುಮಾರ ಜೆ. ಹರವಾಳಕರ್ ಮತ್ತು ಸಹೋದರರಿಂದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಸಣಗಿ ಬಲಭೀಮಸೇನ್ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT