ಶನಿವಾರ, ಮೇ 28, 2022
31 °C

ಬಳೂರ್ಗಿ ಚೆಕ್‌ಪೋಸ್ಟ್: ಸಿಬ್ಬಂದಿ ಸಾರ್ವಜನಿಕರ ನಡುವೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದ ಚೆಕ್‌ಪೋಸ್ಟ್‌ನಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ 72 ಗಂಟೆಯ ಒಳಗಿನ ನೆಗಟಿವ್ ರಿಪೋರ್ಟ್‌ ಇದ್ದವರಿಗೆ ಮಾತ್ರ ಗಡಿ ಒಳಗೆ ಬಿಡಲಾಗುತ್ತಿದ್ದು, ಇದರಿಂದ ಆಕ್ರೋಶ ಗೊಂಡ ಜನ ಚೆಕ್‌ಪೋಸ್ಟ್ ಸಿಬ್ಬಂದಿ ಯೊಂದಿಗೆ ವಾಗ್ವಾದ ಮಾಡುತ್ತಿದ್ದಾರೆ.

ನಾವು 2 ಬಾರಿ ಲಸಿಕೆ ಪಡೆದಿದ್ದೇವೆ. ಆದರೆ ನಮಗೆ ಪ್ರವೇಶ ನಿರಾಕರಣೆ ಏಕೆ ಮಾಡುತ್ತಿದ್ದೀರಿ  ಎಂದು ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಪ್ರಯಾಣಿಕರು ಚೆಕ್‌ಪೋಸ್ಟ್‌ ಅಧಿಕಾರಿಗಳಿಗೆ ಪ್ರಶ್ನಿಸು ತ್ತಿರುವುದು ಭಾನುವಾರ ಕಂಡು ಬಂತು.

ಸರ್ಕಾರದ ನಿಯಮಾವಳಿ ಪ್ರಕಾರವಾಗಿ 2 ಡೋಸ್ ಪಡೆದರೂ ಗಡಿ ಒಳಗೆ ಪ್ರವೇಶ ನಿಷೇಧಿಸಲಾಗಿದೆ. 72 ಗಂಟೆಯ ಒಳಗೆ ಆರ್‌ಟಿಪಿಸಿಆರ್ ನೆಗಟಿವ್ ವರದಿ ಇದ್ದರೆ ಮಾತ್ರ ಗಡಿ ಒಳಗೆ ಬಿಡಲಾಗುತ್ತದೆ ಎಂದು ಚೆಕ್‌ಪೋಸ್ಟ್ ಅಧಿಕಾರಿಗಳಾದ ಭಾಗೇಶ ಯಾಳವಾರ, ಮಿಥುನ ಸಿಂಗ್ ತಿಳಿಸಿದರು.

ನಿತ್ಯ ನೂರಕ್ಕೂ ಹೆಚ್ಚು ವಾಹನಗಳು ಮಹಾರಾಷ್ಟ್ರದಿಂದ ಗಡಿಯೊಳಗೆ ಬರುತ್ತಿವೆ. ಅದರಲ್ಲಿ ಗಾಣಗಾಪುರ ದತ್ತ ಮಹಾರಾಜರ ದರ್ಶನಕ್ಕೆ ಮತ್ತು ಪಂಡರಾಪುರಕ್ಕೆ ಯಾತ್ರಿಕರು ಬರುತ್ತಿದ್ದಾರೆ. ಹೀಗಾಗಿ ಮಾಶಾಳ, ಬಳೂರ್ಗಿ ಚೆಕ್‌ಪೋಸ್ಟ್‌ಗಳಲ್ಲಿ ಏನಾದರೂ ಒಂದು ನೆಪವೊಡ್ಡಿ ಗಡಿ ಒಳಗೆ ಪ್ರವೇಶ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

2 ಚೆಕ್‌ಪೋಸ್ಟ್ ಹೊರತು ಪಡೆಸಿ, ಇನ್ನೂ ಕೆಲವು ಅನ್ಯ ಮಾರ್ಗಗಳಿವೆ. ಅಲ್ಲಿಂದಲೂ ಮಹಾರಾಷ್ಟ್ರದ ವಾಹನಗಳು ಬರುತ್ತಿವೆ. ಮತ್ತೊಂದೆಡೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯವರು ಸಹ ಒಂದು ವಾರದಿಂದ ಮಹಾರಾಷ್ಟ್ರದ ಅಕ್ಕಲಕೋಟ, ಸೋಲಾಪುರಕ್ಕೆ ಬಸ್ ಸಂಚಾರ ಆರಂಭಿಸಿದ್ದಾರೆ. ಇದರಿಂದ ತಪಾಸಣೆಗೆ ತೊಂದರೆಯಾಗುತ್ತಿದೆ ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ತಿಳಿಸಿದರು.

ಸಿಬ್ಬಂದಿ ರವಿದಾಸ್ ಕಟ್ಟಿಮನಿ, ರಾಜು ಕಟ್ಟಿಮನಿ, ಮಲ್ಲಿಕಾರ್ಜುನ ಹಡಪದ, ಪ್ರಕಾಶ ರಾಠೋಡ, ಶ್ರೀಶೈಲ ತಳಕೇರಿ, ವಿನೋದ ರಾಠೋಡ, ರಾಜಕುಮಾರ ರಾಠೋಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು