ಶನಿವಾರ, ಅಕ್ಟೋಬರ್ 31, 2020
20 °C

ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು: ಕಲಬುರ್ಗಿ-ವಿಜಯಪುರ ನೇರ ಸಂಚಾರ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜೇವರ್ಗಿ ಬಳಿಯ ಕಟ್ಟಿಸಂಗಾವಿ‌ ಸೇತುವೆ ಮೇಲೆ‌ ವಾಹನ ಸಂಚಾರವನ್ನು ‌ಮತ್ತೆ‌ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕಲಬುರ್ಗಿ ಮತ್ತು ವಿಜಯಪುರ ನೇರ ಸಂಚಾರ ‌ಸ್ಥಗಿತಗೊಂಡಿದೆ.

ಅಫಜಲಪುರ ‌ಮಾರ್ಗವಾಗಿ ದೇವಣಗಾಂವ ‌ಸೇತುವೆ‌ ಮೂಲಕ‌ ಸಂಚರಿಸಬೇಕಾಗಿದೆ. ಭೀಮಾ ನದಿಯಲ್ಲಿ 7.80 ಲಕ್ಷ ಕ್ಯುಸೆಕ್ ನೀರು‌ ಹರಿಯುತ್ತಿದ್ದು, ಕಟ್ಟಿಸಂಗಾವಿಯ ಹೊಸ‌ ಸೇತುವೆ ‌ಮುಳುಗದಿದ್ದರೂ ಸುರಕ್ಷತಾ ‌ಕ್ರಮವಾಗಿ ಬಂದ್ ಮಾಡಲಾಗಿದೆ.

ಕಲಬುರ್ಗಿ ಜಿಲ್ಲೆಯ ಸೊನ್ನ ಬ್ಯಾರೇಜಿನ ಬಳಿ ಮಧ್ಯಾಹ್ನ 12ರಿಂದ ಭೀಮಾ ನದಿಯಲ್ಲಿ ನೀರಿನ ‌ಹರಿವು 8 ಲಕ್ಷ ಕ್ಯುಸೆಕ್ ತಲುಪಿದೆ.

ಅಪಾಯ ಪರಿಸ್ಥಿತಿ ನಿಭಾಯಿಸಲು 120 ಪೊಲೀಸರ ನಿಯೋಜನೆ    

ವಾಡಿ: ಸೊನ್ನ ಬ್ಯಾರೇಜ್‌ನಿಂದ 7.80ಲಕ್ಷ ಕ್ಯೂ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಭೀಮಾ ನದಿ ಪಾತ್ರದ ಕಡಬೂರು,  ಚಾಮನೂರು, ಕುಲಕುಂದಿ, ಮಾರಡಗಿ,  ತುನ್ನೂರು, ಕೊಲ್ಲೂರು ಹಾಗೂ ಸನ್ನತಿ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. 

ಎರಡು ದಿನಗಳ ಹಿಂದೆ 3.50ಲಕ್ಷ ಕ್ಯೂ ನೀರು ಬಿಟ್ಟಾಗ 6 ರಿಂದ 8 ಅಡಿ ನೀರು ಗ್ರಾಮಗಳ ಒಳಗೆ ಹೊಕ್ಕ ಹಿನ್ನೆಲೆಯಲ್ಲಿ ಜನರು ಅಪಾರ ಸಂಕಷ್ಟಕ್ಕೆ ತುತ್ತಾಗಿದ್ದರು. 

ಈಗ ಹೆಚ್ಚು ಕಡಿಮೆ ಅದರ ಎರಡು ಪಟ್ಟು ನೀರು ಹೊರಬಿಡಲಾಗುತ್ತಿದ್ದು, ಗ್ರಾಮಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ. 

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯ ಇಬ್ಬರು ಸಿಪಿಐ, ಐವರು ಪಿಎಸ್‌ಐ ಸೇರಿದಂತೆ ಒಟ್ಟು 120 ಜನ ಸಿಬ್ಬಂದಿಗಳನ್ನು ಆಯಾ ಕಡೆಗಳಲ್ಲಿ  ನಿಯೋಜಿಸಲಾಗಿದೆ. 

ಕುಂದನೂರು, ಕಡಬೂರು, ಇಂಗಳಗಿ, ಮಾರಡಗಿ ಗ್ರಾಮಗಳಲ್ಲಿ ಪರಿಹಾರ ಕೇಂದ್ರಗಳನ್ನು ಮುಂದುವರೆಸಲಾಗುತ್ತಿದೆ. ಕೆಲವು ಕಡೆ ಸರಿಯಾದ ಊಟ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. 

ಕಡಬೂರು ಗ್ರಾಮದಲ್ಲಿ 300 ಮನೆಗಳ ಪೈಕಿ 120 ಮನೆಗಳ ಒಟ್ಟು 400 ಜನರನ್ನು ಸ್ಥಳಾಂತರ ಮಾಡಲಾಗಿದೆ.

ಭೀಮಾ ನದಿಯ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆ

ಭೀಮಾ ನದಿಯ ನೀರು ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಆದ್ದರಿಂದ ಕಟ್ಟಿಸಂಗಾವಿ ಸೇತುವೆ ಬಂದ ಮಾಡಲಾಗಿದೆ ಕಲಬುರಗಿ ಮತ್ತು ಜೇವರ್ಗಿ ಮಾರ್ಗಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ  ಕೋನಾಹಿಪ್ಪರಗಿ ಬ್ರಿಡ್ಜ್ ಕಂ ಬ್ಯಾರೇಜ್ ಮುಖಾಂತರ ಬಸ್ಸುಗಳು ಜೀಪುಗಳು ಲಾರಿಗಳು ಚಲಿಸುತ್ತಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು