ಸೋಮವಾರ, ಜನವರಿ 20, 2020
17 °C

ಬೈಕ್ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಚಿಂಚೋಳಿ ಹಾಗೂ ಚಿಮ್ಮನಚೋಡದಿಂದ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಎರಡು ಬೈಕ್ ಮಧ್ಯೆ ತಾಲ್ಲೂಕಿನ ಕನಕಪುರ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿ ಭಾನುವಾರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಲಿತ ಸೇನೆ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಬಂಡಪ್ಪ ಯಂಗೆನೋರ ಹಾಗೂ ಸಾಸರಗಾಂವ ತಾಂಡಾದ ಜೆಸಿಬಿ ಆಪರೇಟರ್ ಕೆಲಸ ಮಾಡುವ ಧೋಳ್ಯಾ ನರಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಪ್ಪನವರ ಕಾಲು ಮುರಿದಿದೆ. ಜತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಧೋಳ್ಯಾ ಎದೆಗೆ ಭಾರಿ ಪೆಟ್ಟಾಗಿದ್ದು ಅವರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ಆ್ಯಂಬುಲೆನ್ಸ್ ನಲ್ಲಿ ಕಲಬುರ್ಗಿಗೆ ಕರೆದೊಯ್ಯಲಾಗಿದೆ.

ಚಿಂಚೋಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು