ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳವು ಆರೋಪಿ ಬಂಧನ: 13 ಬೈಕ್ ವಶ

Last Updated 28 ಜುಲೈ 2022, 5:06 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿ, ಸಿದ್ದಾರೂಢ ಕಾಲೊನಿ ನಿವಾಸಿ ಫತ್ರು ಷಾ ಪಾಶಾ (22) ಎಂಬ ಆರೋಪಿಯನ್ನು ಅಶೋಕ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಆರೋಪಿಯಿಂದ ₹ 6 ಲಕ್ಷ ಮೌಲ್ಯದ ವಿವಿಧ ಮಾಡಲ್‌ಗಳ 13 ಬೈಕ್‌ಗಳನ್ನು ವಶಪಡಿಸಿಕೊಂಡರು.

ಇಲ್ಲಿನ ಬಸವನಗರ ಬಡಾವಣೆಯ ನಿವಾಸಿ ಶಿವಮೂರ್ತಿ ಮರಲಿಂಗಪ್ಪ ಎಂಬುವರು ಬೈಕ್‌ ಕಳವು ಆಗಿರುವ ಬಗ್ಗೆ ಅಶೋಕ ನಗರ ಪೊಲೀಸ್‌
ಠಾಣೆಗೆ ದೂರು ನೀಡಿದ್ದರು. ಅಶೋಕ ನಗರ ಪೊಲೀಸ್ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಂಡಿತ್‌ ಸಗರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಎಸ್‌ಐ ನಿಂಗಪ್ಪ, ಹೆಡ್‌ಕಾನ್‌ಸ್ಟೆಬಲ್‌ಗಳಾದ ವೈಜನಾಥ, ಭೀಮಾಶಂಕರ, ಕಾನ್‌ಸ್ಟೆಬಲ್‌ಗಳಾದ ಶಿವಲಿಂಗ, ನೀಲಕಂಠ ಕಾರ್ಯಾಚರಣೆ ನಡೆಸಿದರು.

ಗಾಂಜಾ ಜಪ್ತಿ: ಬಂಧನ

ಕಲಬುರಗಿ: ನಗರದ ಎಂಎಸ್‌ಕೆ ಮಿಲ್ ಆವರಣದಲ್ಲಿ ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಾಣತಿಹಾಳ ಗ್ರಾಮದ ಧರ್ಮರಾಜ ನಿಂಗಪ್ಪ ಬೇವಿನಕಟ್ಟಿ(23) ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಜಿಲ್ಲೆಯ ಉಮರ್ಗಾ ತಾಲ್ಲೂಕಿನ ಭೀಮ ನಾರಾಯಣ ಹೊನ್ನಳ್ಳಿ(32) ಬಂಧಿತ ಆರೋಪಿಗಳು. ಉಮರ್ಗಾ ತಾಲ್ಲೂಕಿನ ದಾಗತೆವಾಡಿ ಗ್ರಾಮದ ಲಕ್ಷ್ಮಣ ವೆಂಕಟ ಸೀತಾಳಗೇರೆ(36) ಪರಾರಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ₹2.30 ಲಕ್ಷ ಮೌಲ್ಯದ 23 ಕೆ.ಜಿ ಗಾಂಜಾ, 2 ಮೊಬೈಲ್, ₹2,800 ನಗದು, ಒಂದು ಬೈಕ್‌ ವಶಕ್ಕೆ ಪಡೆಯಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ. ಸಿಸಿಬಿ ಪಿಐ ವಾಜೀದ ಪಟೇಲ, ತಹಶೀಲ್ದಾರ್ ವೆಂಕಣ್ಣಗೌಡ ಬಿ. ಪಾಟೀಲ, ಕಂದಾಯ ನಿರೀಕ್ಷಕ ಗುರುಪ್ರಸಾದ ಸಿದ್ದಯ್ಯ, ಸಿಸಿಬ ಘಟಕದ ಸಿಬ್ಬಂದಿ ರವೀಂದ್ರಕುಮಾರ, ವೇದರತ್ನ, ಮಲ್ಲಿಕಾರ್ಜುನ, ಶರಣಬಸಪ್ಪ, ಕೇಸುರಾಯ, ಸುನೀಲಕುಮಾರ, ಯಲ್ಲಪ್ಪ, ಶಿವಕುಮಾರ, ಅಶೋಕ ಕಟಕೆ, ರಾಜಕುಮಾರ, ವಿಶ್ವನಾಥ, ಅರವಿಂದ ಇದ್ದರು.

ಗಾಂಜಾ ಸಾಗಣೆ: ಇಬ್ಬರ ಬಂಧನ
ಕಮಲಾಪುರ: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬುಧವಾರ ಬಂಧಿಸಿದ ಪೊಲೀಸರು 540 ಗ್ರಾಮ ಗಾಂಜಾ ಹಾಗೂ ₹ 30 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಕಾಳಗಿ ತಾಲ್ಲೂಕಿನ ರುಮ್ಮನಗುಡ ತಾಂಡಾದ ಸುನೀಲ ದೇವಿದಾಸ ರಾಠೋಡ್‌, ಕರಣ ನೀಲಕಂಠ ಜಾಧವ್‌ ಬಂಧಿತ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಕಮಲಾಪುರ ತಾಲ್ಲೂಕಿನ ಭುಂಯಾರ ಕ್ರಾಸ್‌ ಬಳಿ ಕಾರು ತಡೆದು ದಾಳಿ ಮಾಡಿದ್ದಾರೆ.

ಎಸ್‌ಪಿ ಇಶಾ ಪಂತ್‌, ಎಎಸ್‌ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಶೀಲವಂತ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಮಂತ ಇಲ್ಲಳ ನೇತೃತ್ವದಲ್ಲಿ ಮಹಾಗಾಂವ ಪಿಎಸ್‌ಐ ಶಿವಶಂಕರ ಸುಬೇದಾರ, ಮಹಾಗಾಂವ ಪಿಎಸ್‌ಐ ಹುಸೇನ ಭಾಷಾ, ಸಿಬ್ಬಂಧಿಗಳಾದ ಕುಪೇಂದ್ರ, ಕಿಶನ್‌ ಜಾಧವ್, ರಾಜಶೇಖರ, ಅಶೋಕ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡಿಸಿದೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT