ಬುಧವಾರ, ಸೆಪ್ಟೆಂಬರ್ 22, 2021
23 °C

ಕಲಬುರ್ಗಿ: ಮುರುಗೇಶ ನಿರಾಣಿ-ಬಸವರಾಜ ಪಾಟೀಲ ಸೇಡಂ ಗೋಪ್ಯ ಮಾತುಕತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಾಟೀಲ ಸೇಡಂ ಅವರೊಂದಿಗೆ ಶನಿವಾರ ಗೋಪ್ಯ ಮಾತುಕತೆ ನಡೆಸಿದರು.

ಗುರುಪೌರ್ಣಿಮೆ ಅಂಗವಾಗಿ ಸೇಡಂ ಅವರನ್ನು ಸನ್ಮಾನಿಸಿ ಪಾದಗಳಿಗೆ ನಮಸ್ಕಾರ ಸಲ್ಲಿಸಿದ ನಿರಾಣಿ ಅವರು, ಕೆಲ ಹೊತ್ತು ಎಲ್ಲರಿಂದ ದೂರ ಸರಿದು ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

‘ಗುರುಪೌರ್ಣಿಮೆಯ ಕಾರಣ ನನ್ನ ಗುರುಗಳಿಗೆ ಸನ್ಮಾನಿಸಿ ಸಿಹಿ ತಿನ್ನಿಸಿದ್ದೇನೆ. ಇದರಲ್ಲಿ ಹೊಸ ವಿಚಾರ ಏನೂ ಇಲ್ಲ’ ಎಂದು ಸಚಿವ ಹೇಳಿದರು. ಈ ಸಂದರ್ಭದಲ್ಲಿ ಸೇಡಂ ಅವರ ಹತ್ತಿರ ಬಂದ ಪಕ್ಷದ ಕೆಲವು ಮುಖಂಡರು ‘ಸಾಹೇಬರಿಗೆ ನಿಮ್ಮ ಆಶೀರ್ವಾದ ಬೇಕು’ ಎಂದು ಕೋರಿದರು.

ಶಾಸಕರಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್‌ ಸದಸ್ಯ ಶಶೀಲ್ ನಮೋಶಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಕೂಡ ಜತೆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು