ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಗಾಳಿಗೆ ಸಮೂಹ ಸಾರಿಗೆ ಮದ್ದು: ಸಿ.ಎನ್. ಮಂಜಪ್ಪ

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುದ್ಧ ವಾಯು ದಿನಾಚರಣೆ
Last Updated 8 ಸೆಪ್ಟೆಂಬರ್ 2021, 3:21 IST
ಅಕ್ಷರ ಗಾತ್ರ

ಕಲಬುರ್ಗಿ: ಶುದ್ಧ ಗಾಳಿ ಪಡೆಯಬೇಕು ಎಂದರೆಸಮೂಹ ಸಾರಿಗೆ ವ್ಯವಸ್ಥೆ, ರಸ್ತೆ ಬದಿಗಳಲ್ಲಿ ಹಸಿರೀಕರಣವೇ ಮದ್ದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸಿ.ಎನ್. ಮಂಜಪ್ಪ ಅಭಿಪ್ರಾಯಪಟ್ಟರು.

ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ವಿಜ್ಞಾನ ಕೇಂದ್ರ, ಮತ್ತು ಪಿಡಿಎ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ಜಂಟಿಯಾಗಿ ಆಯೋಜಿಸಿದ್ದ ‘ಅಂತರ ರಾಷ್ಟ್ರೀಯ ನೀಲಾಕಾಶಕ್ಕೆ ಶುದ್ಧ ವಾಯು ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಮಾತನಾಡಿದರು.

ವಾಯುಮಾಲಿನ್ಯ ಮಾಪನಾಂಕಗಳನ್ನು ಪರಿಗಣಿಸಿ ನೋಡಿದಾಗ ಕಲಬುರ್ಗಿ ನಗರವು ವಾಯು ಮಾಲಿನ್ಯಕ್ಕೊಳಗಾದ ನಗರವೆಂದು ತಿಳಿದಿದೆ. ಆದ್ದರಿಂದ ನಮ್ಮ ನಗರವನ್ನು ವಾಯು ಪರಿಶುದ್ಧ ನಿರ್ಮಲ ನಗರವನ್ನಾಗಿ ಮಾಡಿ ಜನರ ಆರೋಗ್ಯ ಕಾಪಾಡುವದು ನಮ್ಮ ಆದ್ಯ ಕರ್ತವ್ಯ ಎಂದರು.

ಜಿಲ್ಲಾ ವಿಜ್ಞಾನ ಕೇಂದ್ರದ ವೈಜ್ಞಾನಿಕ ಅಧಿಕಾರಿ ಲಕ್ಷ್ಮಿನಾರಾಯಣ ಮಾತನಾಡಿ,ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯದ ಕುರಿತು ಅರಿವು ಮೂಡಿಸಬೇಕು. ಜೊತೆಗೆ ಎಲ್ಲಾ ಕ್ಷೇತ್ರದ ಜನರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವುದು ಮುಖ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಡಾ. ಶಶಿಧರ ಕಲಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಬಿ.ಜಿ. ಮಹಿಂದ್ರ ಅತಿಥಿ ಪರಿಚಯ ಮಾಡಿದರು. ಸಹ ಸಂಯೋಜಕ ಪ್ರೊ. ಶಿವರಾಜ ಇಂಗನಕಲ್ ಉಪನ್ಯಾಸ ನೀಡಿದರು. ಅರ್ಚನಾ ಪ್ರಾರ್ಥಿಸಿದರು. ಪ್ರಭಾರ ಮುಖ್ಯಸ್ಥೆಪ್ರೊ. ಕೆ.ಎಂ. ಗಿರಿಜಾ ವಂದಿಸಿದರು, ರಾಮೇಶ್ವರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT