ಭಾನುವಾರ, ಮೇ 29, 2022
20 °C

ಕಲಬುರ್ಗಿ: ಕಲ್ಲುಗಣಿಯಲ್ಲಿ ಬಿದ್ದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯ ಹೊರವಲಯದಲ್ಲಿ ಶುಕ್ರವಾರ ಕಲ್ಲುಗಣಿಯಲ್ಲಿ ಬಿದ್ದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ.‌

ಮಿಥುನ್‌ ಜಾಧವ ಎನ್ನುವವರ ಪುತ್ರ ಮಂಗೇಶ ಮೃತಪಟ್ಟ ಬಾಲಕ. ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್‌ ಅವರು ತಮ್ಮೊಂದಿಗೆ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಆಳವಾಗಿ ತೆಗೆದ ಗಣಿ ಕಂದಕದಲ್ಲಿ ಮಳೆ ನೀರು ತುಂಬಿಕೊಂಡಿದೆ. ಅದರ ದಡದ ಮೇಲೆ ಬಾಲಕ ಆಟವಾಡುತ್ತಿದ್ದ. ಕೆಲಸಗಾರರು ಹಾಸುಗಲ್ಲೊಂದನ್ನು ಎಳೆದಾಗ ಅದರ ಪಕ್ಕದ ಕಲ್ಲೂ ಕುಸಿಯಿತು. ಅದರೊಂದಿಗೆ ಬಾಲಕ ಕೂಡ ನೀರಿನಲ್ಲಿ ಬಿದ್ದ. ತೀವ್ರ ಪೆಟ್ಟುಬಿದ್ದ ಕಾರಣ ಬಾಲಕ ಪ್ರಾಣ ಕಳೆದುಕೊಂಡ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು