ಆಳಂದ: ‘ಸತ್ಯ, ಸರಳತೆ ಹಾಗೂ ಅಹಿಂಸೆಯ ಮಾರ್ಗಗಳಲ್ಲಿ ಪರಿವರ್ತನೆ ತಂದ ಗಾಂಧೀಜಿ ಅವರ ಬದುಕು ಜಗತ್ತಿಗೆ ಮಾದರಿಯಾಗಿದೆ’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಸಮತಾ ಆಯುರ್ವೇದಿಕ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಳಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಹಮ್ಮಿಕೊಂಡ ಗಾಂಧಿ ಚಿಂತನೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ಗಾಂಧೀಜಿ ಅವರನ್ನು ಇಂದಿನ ಯುವಕರು ಮರೆಯುತ್ತಿದ್ದಾರೆ. ಭಾರತ ಸೇರಿದಂತೆ ಜಗತ್ತಿನ ಹಲವು ಹೋರಾಟಗಳಿಗೆ ಹಾಗೂ ರಾಷ್ಟ್ರನಾಯಕರಿಗೆ ಗಾಂಧೀಜಿ ಸ್ಫೂರ್ತಿಯಾಗಿದ್ದರು. ಶಾಲಾ ಕಾಲೇಜುಗಳಲ್ಲಿ ಗಾಂಧೀಜಿ ಹೋರಾಟ, ಕೊಡುಗೆ ಕುರತು ಅಧ್ಯಯನ ಶಿಬಿರ, ಸಂವಾದಗಳು ನಿರಂತರವಾಗಿ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಬೆಂಗಳೂರಿನ ಜಿವಿಎಸ್ ಪಿ ಸಂಯೋಜಕಿ ಅಬೀದಾ ಬೇಗಂ ಮಾತನಾಡಿ, ‘ಗಾಂಧೀಜಿ ಅವರ ಚಿಂತನೆಗಳು ಸದಾ ಪ್ರಸ್ತುತವಾಗಿದ್ದು, ಜಗತ್ತಿನ ಹಲವು ಸಮಸ್ಯೆಗಳಿಗೆ ಅವರ ಚಿಂತನೆಗಳಲ್ಲಿ ಪರಿಹಾರವಿದೆ’ ಎಂದರು.
ವಿಜಯಪುರದ ಗಾಂಧಿ ಫೌಂಡೇಷನ್ ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ‘ಗಾಂಧೀಜಿ ವಿಚಾರಧಾರೆಗಳು ಹತ್ತಿಕ್ಕಿಲು ಸಾಧ್ಯವಿಲ್ಲ. ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಸೇರಿದಂತೆ ಹಲವು ನಾಯಕರು ಗಾಂಧಿ ಚಿಂತನೆಗಳಿಂದ ಪ್ರಭಾವಿತಗೊಂಡವರು. ಯುವಕರು ಗಾಂಧೀಜಿ ಮಾರ್ಗ ಅನುಸರಿದರೆ ಸರ್ವೋದಯ ಸಾಧ್ಯ’ ಎಂದರು.
ಬೆಂಗಳೂರಿನ ಚಿಂತಕ ಅಲಿಬಾಬಾ, ಹೋರಾಟಗಾರ ಅರುಣ ರೇಣಕೆ, ಎಂ.ಬಿ.ಪಾಟೀಲ, ಸಂಜಯ ಪಾಟೀಲ ಮಾತನಾಡಿದರು. ಪ್ರಾಂಶುಪಾಲ ರವಿಚಂದ್ರ ಕಂಟೆಕೂರೆ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಬೀದಾ ಬೇಗಂ, ನೇತಾಜಿ ಗಾಂಧಿ ಹಾಗೂ ಅಲಿಬಾಬಾ ಬೆಂಗಳೂರು ಅವರಿಂದ ವಿವಿಧ ವಿಷಯಗಳ ಮೇಲೆ ಮೂರು ಗೋಷ್ಟಿಗಳು ಜರುಗಿದವು. ಸಂಗೀತ ಕಲಾವಿದರಾದ ಶಂಕರ ಹೂಗಾರ, ಶಿವಶರಣಪ್ಪ ಪೂಜಾರಿ, ಅಶೋಕ ಆಳಂದ ಅವರು ನಡೆಸಿಕೊಟ್ಟ ಗಾಂಧಿಸ್ಮೃತಿ ಗಾಯನವು ಮನ ಸೆಳೆಯಿತು.
ಗುಲಬರ್ಗಾ ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಎನ್.ಜಿ. ಕಣ್ಣೂರು, ಪತ್ರಗಾರ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿದರು.
ಸಂಯೋಜಕ ದೊಂಡಿಬಾ ನಿಕ್ಕಂ, ಕಲ್ಯಾಣರಾವ ಪಾಟೀಲ, ಕೆ.ಎಸ್. ಮಾಲಿಪಾಟೀಲ, ಮಹಾದೇವಪ್ಪ ಪಾಟೀಲ, ಅಶೋಕ ಹತ್ತಿ, ದೇವಿಚಂದ ರಾಠೋಡ, ಸಿದ್ದರಾಮ ಪ್ಯಾಟಿ, ಬಾಬುರಾವ ಮಡ್ಡೆ, ಪ್ರಭಾಕರ ಸಲಗರೆ, ಮೌಲಾ ಮುಲ್ಲಾ, ಮಲ್ಲಿನಾಥ ಯಲಶೆಟ್ಟಿ, ಸೂಗೂರೇಶ್ವರ, ಮಹ್ಮದ್ ಯೂನಸ್, ಶ್ರೀಶೈಲ ಮಾಡ್ಯಾಳೆ, ಬಸಣ್ಣಾ ಶೆಟ್ಟಿ, ನಾಗಣ್ಣಾ ಸಲಗರೆ, ಎಲ್.ಎಸ್. ಬೀದಿ ಉಪಸ್ಥಿತರಿದ್ದರು.
ಭಾಗೀರಥಿ ಎಚ್ ಗುಡ್ಡೋಡಗಿ ನಿರೂಪಿಸಿದರು. ಅರವಿಂದ ಅಂಗಡಿ ಸ್ವಾಗತಿಸಿದರು. ರಮೇಶ ಮಳಗೆ ವಂದಿಸಿದರು. ಆಳಂದ, ಮಾದನ ಹಿಪ್ಪರಗಿ ಸರ್ಕಾರಿ ಪದವಿ ಕಾಲೇಜು, ಸಂಬುದ್ಧ ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದರು.
ಗಾಂಧೀಜಿ ಅಧ್ಯಯನ ಕೇಂದ್ರದ ಉದ್ಘಾಟನೆ ಮನ ಸೆಳೆದ ಗಾಂಧಿಸ್ಮೃತಿ ಗಾಯನ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.