ಕಲಬುರಗಿ: ‘ಯಜ್ಞೋಪವಿತ ಧಾರಣೆ ವಿಪ್ರರಿಗೆ ವಿಶೇಷ ಹಬ್ಬ. ಇದರಲ್ಲಿ ಎರಡು ವಿಧಾನಗಳು. ಒಂದು ಉತ್ಸರ್ಜನ, ಇನ್ನೊಂದು ಉಪಾಕರ್ಮ. ಉತ್ಸರ್ಜನ ಅಂದರೆ ನಾವು ವರ್ಷಪೂರ್ತಿ ಮಾಡಿದ ವೇದಾಧ್ಯಾನ ಸಮರ್ಪಣೆ ಭಾವ. ಉಪಾಕರ್ಮ ಅಂದರೆ ಮತ್ತೆ ವೇದಾಧ್ಯಯನಕ್ಕೆ ಅನುಘ್ನೇಯ (ಪ್ರಾರಂಭ) ಭಾವ’ ಎಂದು ವೇದಮೂರ್ತಿ ಆಕಾಶ ರಾಜಾಚಾರ್ಯ ಹೇಳಿದರು.
ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕ್ಯ ಭವನದಲ್ಲಿ ಶ್ರಾವಣ ಪೌರ್ಣಿಮೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಶುಕ್ಲಯಜುರ್ವೇದಿಯ ಉಪಾಕರ್ಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಕಾಶರಾಜಾಚಾರ್ಯ ಹಾಗೂ ಶ್ರೀರಾಮಾಚಾರ್ಯ ನೇತೃತ್ವದಲ್ಲಿ ಯಜ್ಞೋಪವಿತಧಾರಣೆಯ ವಿವಿಧ ಕೈಂಕರ್ಯಗಳು ಜರುಗಿದವು. ನಂತರ ವೈದಿಕ ಅಭಯಾಚಾರ್ಯ ಸತ್ಯನಾರಾಯಣ ವ್ರತಪೂಜೆ ನಡೆಸಿಕೊಟ್ಟರು.
ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ವಕೀಲ ನೇತೃತ್ವದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಸಾಮೂಹಿಕ ಅಷ್ಟೋತ್ತರ ಶತನಾಮ ಪಾರಾಯಣ ಹಾಗೂ ಈಶಾವಾಷ್ಯೊಪನಿಷತ್ ಪಠಿಸಲಾಯಿತು. ಸಮಿತಿಯ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ಮಾತನಾಡಿದರು. ಶಾಮಾಚಾರ್ಯ ಬೈಚಬಾಳ್, ಚಂದ್ರಕಾಂತ ಗದಾರ್, ಅಶೋಕ್ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ, ಭೀಮಸೇನರಾವ್ ಸಿಂಧಗೇರಿ, ವಾಸುದೇವರಾವ್ ಕುಳಗೇರಿ, ಸುಧೀರ್ ಕುಲಕರ್ಣಿ, ಡಾ. ಉಡುಪಿಕೃಷ್ಣ ಜೋಶಿ, ಮಂಜುನಾಥ್ ಕುಲಕರ್ಣಿ, ವಿನುತ ಜೋಶಿ ಪಾಲ್ಗೊಂಡಿದ್ದರು.
ಗೋಮುಖ ರಾಘವೇಂದ್ರ ಸ್ವಾಮಿ ಮಠ:
ನಗರದ ಜಗತ್ ಬಡಾವಣೆಯ ಗೋಮುಖ ರಾಘವೇಂದ್ರ ಸ್ವಾಮಿ ಮಠದಲ್ಲಿ ಯಜ್ಞೋಪವೀತ ಧಾರಣೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಪ್ರಹ್ಲಾದಾಚಾರ ಜೋಷಿ ಮತ್ತು ನಾರಾಯಣಾಚಾರ ಜೋಷಿ ನೇತೃತ್ವದಲ್ಲಿ ಯಾಜ್ಞಿಕ ಪದ್ಧತಿಯಂತೆ ಹೋಮ ಹವನಾದಿಗಳೊಂದಿಗೆ ಈ ಕಾರ್ಯಕ್ರಮ ಜರುಗಿತು.
ಸಮಿತಿಯ ಅಧ್ಯಕ್ಷ ಅನೀಲ ಬಡದಾಳ, ಉಪಾಧ್ಯಕ್ಷ ಗೋಟೂರಕರ್ ಹನುಮಂತರಾವ ಕುಲಕರ್ಣಿ, ಪವನ ಫಿರೋಜಾಬಾದ್, ನೀಲಲೋಹಿತ ಜೇವರ್ಗಿ, ಹನುಮಂತರಾವ ಜೇವರ್ಗಿ, ಶ್ರೀಕಾಂತ ಮತ್ತು ಶಶಿಕಾಂತ ಸಂಜೀವ ಸಾಗನೂರ, ನಂದಕುಮಾರ ಮಾಲಗತ್ತಿ, ಪ್ರಮೋದ ದೇಸಾಯಿ, ಉಮಾಕಾಂತ ಕುಲಕರ್ಣಿ, ಉದಯ ಪಾಟೀಲ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.