ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಭೃಂಗಿ ಪಾಚೇಶ್ವರ ಜಾತ್ರಾ ಮಹೋತ್ಸವ

Last Updated 8 ಏಪ್ರಿಲ್ 2022, 5:33 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಚಂದನಕೇರಾ ಗ್ರಾಮದ ಭೃಂಗಿ ಪಾಚೇಶ್ವರ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಪಟ್ಟಾಧಿಕಾರದ 7ನೇ ವಾರ್ಷಿಕೋತ್ಸವ ಹಾಗೂ ಭೃಂಗಿ ಪಾಚೇಶ್ವರರ ಜಾತ್ರಾ ಮಹೋತ್ಸವ ಜರುಗಿತು.

ನಾಲತ್‌ವಾಡದ ವೀರೇಶ್ವರ ಶರಣರ ಪುರಾಣ ಪ್ರವಚನ 10 ದಿನಗಳ ನಡೆಯಿತು. ಪುರಾಣ ಮಂಗಲ ಮತ್ತು ಪ್ರಸಾದ ನಡೆಸಿದ ನಂತರ ಪಲ್ಲಕ್ಕಿ ಉತ್ಸವ ಜರುಗಿತು.

ಪುರವಂತರ ಶಸ್ತ್ರ ಪ್ರಯೋಗ, ಭಜನೆಯೊಂದಿಗೆ ಗ್ರಾಮದಲ್ಲಿ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಪಲ್ಲಕ್ಕಿಯೊಂದಿಗೆ ಗ್ರಾಮ ಪ್ರದಕ್ಷಿಣೆ ಹಾಕಿದರು.

ಉಮೇಶ ಪಾಟೀಲ, ಸಿದ್ದಣ್ಣಗೌಡ ಪಾಟೀಲ ಸಿನಿಗೊಂಡ, ನಾಗಣಗೌಡ ಪಾಟೀಲ ಸಿನಿಗೊಂಡ,
ದತ್ತಾತ್ರೆಯ ರಾಯಗೋಳ, ವೀರಭದ್ರಪ್ಪ ಸಿರಂಜಿ, ಶರಣಗೌಡ ಪಾಟೀಲ, ಭವಾನರಾವ್ ಫತೆಪುರ, ಬಾಬುರಾವ್ ಭೂಂಯಾರ್, ಸಿದ್ದು ಪಡಶೆಟ್ಟಿ, ಹಣಮಂತರಾವ್ ಪಾಣಿ, ಕಾಳೇಶ್ವರ ರಾಮಗೊಂಡ, ಸುನೀಲ ಮುಡಬಿ, ಮಲ್ಲಿನಾಥ ವಗ್ಗೆ, ನಂದಪ್ಪ ಪೂಜಾರಿ, ರವಿಶಂಕರ ಸಿರಂಜಿ, ಕಮಲಾಕರ ಕಡಗದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT