ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸಿಇಟಿ: ಎಂಜಿನಿಯರಿಂಗ್‌ನಲ್ಲಿ ಶೇ 94.55ರಷ್ಟು ಫಲಿತಾಂಶ

Published 1 ಜೂನ್ 2024, 16:31 IST
Last Updated 1 ಜೂನ್ 2024, 16:31 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಶನಿವಾರ ಪ್ರಕಟಿಸಿದ್ದು, ಜಿಲ್ಲೆಯ 13,166 (ಶೇ 94.55ರಷ್ಟು) ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ.

ಎಂಜಿನಿಯರಿಂಗ್ ಜತೆಗೆ ವೆಟರ್ನರಿ, ಕೃಷಿ ವಿಜ್ಞಾನ, ಫಾರ್ಮಸಿ, ನ್ಯಾಚುರೋಪಥಿ, & ಯೋಗ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸ್‌ಗಳ ಪರೀಕ್ಷೆಗೆ 14,302 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ 13,925 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಶನಿವಾರ ಪ್ರಕಟವಾದ ಫಲಿತಾಂಶದ ಅನ್ವಯ, ನ್ಯಾಚರೋಪತಿ ಅಂಡ್ ಯೋಗಿಕ್ ಸೈನ್ಸಸ್‌ಗೆ (ಬಿಎನ್‌ವೈಎಸ್) 12,253, ಬಿ.ಎಸ್ಸಿಗೆ (ಕೃಷಿ) 12,200, ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್‌ಗೆ (ಬಿವಿಎಸ್ಸಿ) 12,261, ಬಿ.ಫಾರ್ಮಾಗೆ 13,256, ಡಿ. ಫಾರ್ಮಾಗೆ 13,267 ಹಾಗೂ ಬಿ.ಎಸ್ಸಿ ನರ್ಸಿಂಗ್‌ಗೆ 12,285 ಅಭ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಎಂಜಿನಿಯರಿಂಗ್‌ನಲ್ಲಿ ಶೇ 94.55ರಷ್ಟು, ಬಿಎನ್‌ವೈಎಸ್‌ನಲ್ಲಿ ಶೇ 87.99ರಷ್ಟು, ಬಿ.ಎಸ್ಸಿ ಕೃಷಿಯಲ್ಲಿ ಶೇ 87.61ರಷ್ಟು, ಬಿವಿಎಸ್ಸಿಯಲ್ಲಿ ಶೇ 88.05ರಷ್ಟು, ಬಿ.ಫಾರ್ಮಾದಲ್ಲಿ ಶೇ 95.20ರಷ್ಟು, ಡಿ. ಫಾರ್ಮಾದಲ್ಲಿ ಶೇ 95.27ರಷ್ಟು ಹಾಗೂ ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಶೇ 88.22ರಷ್ಟು ಫಲಿತಾಂಶ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT