ಭಾನುವಾರ, ಏಪ್ರಿಲ್ 5, 2020
19 °C

ಕೊರನಾ: ಲ್ಯಾಬ್‌ ವ್ಯವಸ್ಥೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಕೊರೊನಾ ವೈರಾಣು ಪತ್ತೆ ಮಾಡುವ ಸಲುವಾಗಿ ಕಲಬುರ್ಗಿಯ ಜಿಮ್ಸ್‌ನಲ್ಲಿ ತೆರೆಯಲು ಉದ್ದೇಶಿಸಿದ ಪ್ರಯೋಗಾಲಯದ ಸಾಮಗ್ರಿಗಳನ್ನು ಬೆಂಗಳೂರಿನಿಂದ ಸರಬರಾಜು ಮಾಡಲಾಗಿದೆ’ ಎಂದು ಬೆಂಗಳೂರು ಮೆಡಿಕಲ್‌ ಕಾಲೇಜ್‌ ಹಾಗೂ ಸಂಶೋಧನಾ ಸಂಸ್ಥೆ ಸಹಪ್ರಾಂಶುಪಾಲ ಡಾ.ಸತ್ಯಾನಾರಾಯಣ ಎಂ.ಎಸ್‌. ತಿಳಿಸಿದ್ದಾರೆ.

‘ಲ್ಯಾಬ್‌ಗೆ ಬೇಕಾದ ಅಗತ್ಯ ಸಲಕರಣೆಗಳನ್ನು ಬೆಂಗಳೂರು ಮೆಡಿಕಲ್‌ ಕಾಲೇಜು, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ, ರಾಜ್ಯ ಮಟ್ಟದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್)ದಿಂದ ಪೂರೈಸಲಾಗಿದೆ. ಜಿಮ್ಸ್‌ ಬೇಡಿಕೆಯಂತೆ ಅಗತ್ಯ ಏಜೆಂಟ್‌ಗಳನ್ನು ಗುರುವಾರ ಮುಟ್ಟಿಸಲಾಗಿದ್ದು, ಯಂತ್ರವನ್ನೂ ಶುಕ್ರವಾರ ಮುಟ್ಟಿಸಲಾಗುವುದು’‌ ಎಂದು ಅವರು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

‘ಲ್ಯಾಬ್‌ ಸ್ಥಾಪನೆ ಕುರಿತು ಪರಿಶೀಲನೆ ನಡೆಸಲಾಗಿದ್ದು, ವಿಆರ್‌ಡಿಎಲ್‌ನ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಾಗಿದೆ. ಉಪಕರಣಗಳು, ಉಪಭೋಗ್ಯ ವಸ್ತುಗಳು ಮತ್ತು ಪರೀಕ್ಷಾ ಕಾರಕಗಳ ಸ್ಥಿತಿಗತಿಗಳ ಬಗ್ಗೆ ತಿಳಿಸಲಾಯಿತು. ರಿಯಲ್ ಟೈಮ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಉಪಕರಣಗಳನ್ನು ಆಣ್ವಿಕ ರೋಗನಿರ್ಣಯಕ್ಕಾಗಿ ಜಿಮ್ಸ್‌ನಲ್ಲಿ ಸ್ಥಾಪಿಸಲಾಗಿದೆ ಮತ್ತು ಕೋವಿಡ್‌–19 ಶಂಕಿತ ಪ್ರಕರಣಗಳಿಂದ ನಾಸೊಫಾರ್ಂಜಿಯಲ್ ಮತ್ತು ಒರೊಫಾರಂಜಿಯಲ್ ಸ್ವ್ಯಾಬ್‌ಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ವಿಆರ್‌ಡಿಎಲ್, ಆರಂಭಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಶಂಕಿತ ಸಿಒವಿಐಡಿ–19 ರೋಗಿಗಳಿಗೆ ರಿಯಲ್ ಟೈಮ್ ಪಿಸಿಆರ್ ನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದೂ ತಿಳಿಸಿದ್ದಾರೆ.

ಇದೇ ವೇಳೆ ಅವರು, ಪರೀಕ್ಷೆಯ ಕಾರ್ಯಕ್ಷಮತೆ ವಿಶ್ಲೇಷಿಸಲು, ಕಿಟ್‌ಗಳೊಂದಿಗೆ ಒದಗಿಸಲಾದ ನಿಯಂತ್ರಣಗಳನ್ನು ಚಲಾಯಿಸಲು ಅವರು ವಿಆರ್‌ಡಿಎಲ್ ತಂಡಕ್ಕೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಬಿ.ಶರತ್, ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಡಾ.ಪಿ.ಜಿ. ಗಿರೀಶ, ಜಿಮ್ಸ್ ಡಾ.ಕವಿತಾ ಪಾಟೀಲ ಈ ವೇಳೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)