ಭಾನುವಾರ, ಮೇ 9, 2021
24 °C
ಮಹಾರಾಷ್ಟ್ರದಲ್ಲಿ ಸೆಮಿ ಲಾಕ್‌ಡೌನ್‌

ಮಹಾರಾಷ್ಟ್ರದಲ್ಲಿ ಸೆಮಿ ಲಾಕ್‌ಡೌನ್‌: ಆಳಂದ ಗಡಿಕೇಂದ್ರದಲ್ಲಿ ಹೆಚ್ಚಿದ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ನೆರೆಯ ಮಹಾರಾಷ್ಟ್ರದಲ್ಲಿ ಸೆಮಿ ಲಾಕ್‌ಡೌನ್‌ ಜಾರಿಗೊಳಿಸಿದ  ಕಾರಣ ಮಹಾರಾಷ್ಟ್ರದಿಂದ ಅಧಿಕ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದರಿಂದ ಗಡಿ ತಪಾಸಣಾ ಕೇಂದ್ರಗಳಲ್ಲಿ ಕಟ್ಟೆಚ್ಚೆರವಹಿಸಲಾಗಿದೆ.

ತಾಲ್ಲೂಕಿನ ಹಿರೋಳಿ, ನಿಂಬಾಳ ಹಾಗೂ ಖಜೂರಿ ಗ್ರಾಮದ ಗಡಿಯಲ್ಲಿ ಈಗಾಗಲೇ ತಪಾಸಣೆ ಕೇಂದ್ರ ತೆರೆಯಲಾಗಿದೆ. ನೆರೆಯ ಮಹಾರಾಷ್ಟ್ರದಿಂದ ಆಗಮಿಸುವ ವಾಹನಗಳ ತಪಾಸಣೆ ಸೇರಿದಂತೆ ಕೋವಿಡ್‌ ವರದಿ ಪರಿಶೀಲನೆ ಕಾರ್ಯವು ಮುಂದುವರಿದಿದೆ.‌

ಏ.15ರಿಂದ ಮಹಾರಾಷ್ಟ್ರದಲ್ಲಿ ಸೆಮಿ ಲಾಕ್‌ಡೌನ್‌ ವಿಧಿಸಿದ ಪರಿಣಾಮ ರಾತ್ರಿ ಪ್ರಯಾಣಿಕರು ಆಗಮಿಸುವ ನಿರೀಕ್ಷೆ ಇದೆ. ಆದರೆ ಬುಧವಾರ ಸಂಜೆವರೆಗೂ ಕೇವಲ 18 ವಾಹನಗಳು ಮಾತ್ರ ಮಹಾರಾಷ್ಟ್ರದ ಪುಣೆ, ಮುಂಬೈ ಪಟ್ಟಣದಿಂದ ಆಗಮಿಸಿವೆ ಎಂದು ಕಿರಿಯ ಆರೋಗ್ಯ ಸಹಾಯಕ ಬಾಬು ರಾಠೋಡ ತಿಳಿಸಿದರು.

ಯುಗಾದಿ ಹಬ್ಬ ಸೇರಿದಂತೆ ವಿವಿಧೆಡೆ ಜಾತ್ರೆ ಹಾಗೂ ರಂಜಾನ್‌ ಮಾಸದ ಆರಂಭದ ಕಾರಣ ಸಹಜವಾಗಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವರು. ಆದರೆ ಈ ಹಿಂದಿನ ಲಾಕ್‌ಡೌನ್‌ ದಂತೆ ಕಠಿಣ ಕಟ್ಟೆಚ್ಚೆರ ಕ್ರಮಗಳು ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿಲ್ಲ. ಜನದಟ್ಟಣೆ ಹಾಗೂ ಸಭೆ, ಸಮಾರಂಭ ಹಾಗೂ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಮೊದಲಿನಂತೆ ಕೂಲಿಕಾರ್ಮಿಕರು ವಲಸೆ ಬರುವದು ಆಗಲಾರದು ಎಂದು ನೆರೆಯ ವಾಗ್ದರಿಯ ಶಿಕ್ಷಕ ಶಿವಾನಂದ ಗೋಗಾಂವ ‘ಪ್ರಜಾವಾಣಿ’ಗೆ ತಿಳಿಸಿದರು.

ನೆರೆ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿ ಪರಿಶೀಲನೆ ಸೇರಿದಂತೆ ಅಗತ್ಯ ಮಾಹಿತಿ ಸಂಗ್ರಹಿಸಲು ಹಿರೋಳಿ ಹಾಗೂ ನಿಂಬಾಳ ಗಡಿ ಕೇಂದ್ರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾದನಹಿಪ್ಪರಗಾ ಪಿಎಸ್ಐ ಇಂದುಮತಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.